ADVERTISEMENT

‘ನವೋದಯ’ ಪ್ರವೇಶ ಪರೀಕ್ಷೆಪ್ರಶ್ನೋತ್ತರ ಮಾದರಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 19:30 IST
Last Updated 2 ಅಕ್ಟೋಬರ್ 2022, 19:30 IST
   

ಹಿಂದಿನ ಎರಡು ಸಂಚಿಕೆಗಳಲ್ಲಿ ಜವಾಹರ ನವೋದಯ ವಿದ್ಯಾಲಯಗಳ ಬಗ್ಗೆ ಕಿರು ಪರಿಚಯ, ಪ್ರವೇಶ ಪ್ರಕ್ರಿಯೆ, ಪ್ರವೇಶ ಪರೀಕ್ಷೆಗಳು, ಪ್ರಶ್ನೆಗಳ ವಿಭಾಗಗಳು, ಪ್ರಶ್ನೆಪತ್ರಿಕೆಗಳ ಮಾದರಿಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಲಾಗಿತ್ತು.

6ನೆಯ ತರಗತಿಯ ಪ್ರವೇಶ ಪರೀಕ್ಷೆಯ ‘ಮಾನಸಿಕ ಸಾಮರ್ಥ್ಯ’ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಮಾದರಿ ಹಾಗೂ ಕೆಲವು ಉದಾಹರಣೆಗಳನ್ನು ನೋಡಿದ್ದೇವೆ. ಅದರ ಮುಂದುವರಿದ ಭಾಗವೇ ಈ ಲೇಖನ.

ಈ ವಿಭಾಗದಲ್ಲಿ 10 ಭಾಗಗಳಿರುತ್ತವೆ. ಹಿಂದಿನಸಂಚಿಕೆಯಲ್ಲಿ ಮೊದಲ ಎರಡು ಭಾಗಗಳ ಬಗ್ಗೆ ತಿಳಿದು ಕೊಂಡೆವು. ಈ ಸಂಚಿಕೆಯಲ್ಲಿ ಉಳಿದ ಭಾಗಗಳ ಬಗ್ಗೆ ಅರಿಯೋಣ. ಇದರ ನಂತರ ‘ಅಂಕ ಗಣಿತ’ ವಿಭಾಗದ ಪ್ರಶ್ನೆಗಳನ್ನು ನೋಡೋಣ.

ADVERTISEMENT

ಮಾನಸಿಕ ಸಾಮರ್ಥ್ಯ ಪರೀಕ್ಷೆ – ಭಾಗ 3

ಈ ಕೆಳಗೆ ಕೊಟ್ಟಿರುವ ಚಿತ್ರಗಳಲ್ಲಿ ಎಡಬದಿಗೆ ಚೌಕ ಅಥವಾ ವೃತ್ತದ ಒಂದು ಭಾಗವವಿದೆ. ಅದರ ಮಿಕ್ಕ ಭಾಗವನ್ನು ಬಲಬದಿಗೆ ಕೊಡಲಾಗಿದ್ದು, A,B,C,D ಆಕೃತಿಗಳಲ್ಲಿ ಗುರುತಿಸಲಾಗಿದೆ. ಬಲಬದಿಯ ಆಕೃತಿಗಳಲ್ಲಿ ಯಾವ ಚಿತ್ರವು ಎಡಬದಿಯ ಆಕೃತಿಯನ್ನು ಪೂರ್ಣಗೊಳಿಸಲು (ದಿಶೆಯನ್ನು ಬದಲಿಸದೆ) ಸಮರ್ಪಕವಾಗುವುದೋ ಆ ಆಕೃತಿಯನ್ನು ಕಂಡುಹಿಡಿದು ಉತ್ತರಿಸಬೇಕು.

ಉದಾಹರಣೆಗೆ,

ಈ ಮೇಲಿನ ಚಿತ್ರವನ್ನು ಗಮನಿಸಿ. ಇಲ್ಲಿ ಎಡಬದಿಯಲ್ಲಿ (ದೊಡ್ಡದಾಗಿ) ಕೊಟ್ಟಿರುವ ಚಿತ್ರದಲ್ಲಿನ ಕೆಳಭಾಗದ ಚೌಕವು ಖಾಲಿಯಾಗಿದೆ. ಈ ಖಾಲಿಯಾಗಿರುವ ಜಾಗದಲ್ಲಿ ಬಲಭಾಗದ ಆಯ್ಕೆಯ
( A,B,C,D ) ಯಾವ ಚಿತ್ರವನ್ನು ತುಂಬಿಸಿದರೆ ಚಿತ್ರವು ಪೂರ್ಣವಾಗುವುದು?

ಇದಕ್ಕೆ ಉತ್ತರ ಕಂಡುಹಿಡಿಯುವುದು ಸುಲಭ ಅಲ್ಲವೇ? ಎಡಭಾಗದ ಚಿತ್ರವು ನಾಲ್ಕು ಭಾಗಗಳಿಂದ ಕೂಡಿದೆ ಎಂದು ಗಮನಿಸಿದ್ದೀರಿ. ಪ್ರತಿ ಭಾಗವನ್ನು ತುಂಬಿರುವ ಚಿತ್ರಗಳನ್ನು ಗಮನಿಸಿ.

ಈಗ ಖಾಲಿಯಿರುವ ಜಾಗದಲ್ಲಿ ತುಂಬ ಬೇಕಾದ ಚಿತ್ರವನ್ನು ಕಂಡುಹಿಡಿಯುವುದು ಸುಲಭವಲ್ಲವೇ? ಇಲ್ಲಿ ಸರಿ ಉತ್ತರ (D) ಆಗುತ್ತದೆ ಅಲ್ಲವೇ?

ಮತ್ತೊಂದು ಉದಾಹರಣೆಯನ್ನು ನೋಡೋಣ.

ಇಲ್ಲಿಯೂ ಸಹ ಮೊದಲಿನಂತೆಯೇ, ಪ್ರಶ್ನೆಯಲ್ಲಿರುವ ಚಿತ್ರವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿಕೊಂಡು ನೋಡಲು ಪ್ರಯತ್ನಿಸಿ. ಆಗ ಈ ಚಿತ್ರವು ಎಡಭಗದಲ್ಲಿರುವಂತೆ ಕಾಣುತ್ತದೆ.

ಈಗ ಇದನ್ನು ಗಮನಿಸಿ, ಈ ಚಿತ್ರವನ್ನು ಪೂರ್ಣಗೊಳಿಸುವ ಸರಿಯಾದ ಆಯ್ಕೆ ಯಾವುದೆಂದು ನೀವೇ ಹೇಳಬಹುದಲ್ಲವೇ?

ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸಲು ಮೇಲೆ ತಿಳಿಸಿದಂತೆ ಪ್ರಶ್ನೆಯಲ್ಲಿ ಕೊಟ್ಟಿರುವ ಚಿತ್ರವನ್ನು ಸಮಾನ ಭಾಗಗಳಾಗಿ ದೃಶ್ಯೀಕರಿಸಿಕೊಂಡು ಸುಲಭವಾಗಿ ಉತ್ತರಿಸಬಹುದು. ಸ್ವಲ್ಪ ಮಟ್ಟಿನ ಅಭ್ಯಾಸದಿಂದ ಈ ರೀತಿಯ ಪ್ರಶ್ನೆಗಳಿಗೆ ವೇಗವಾಗಿ ಉತ್ತರಿಸುವುದನ್ನು ಕಲಿಯಬಹುದು.

ಮಾನಸಿಕ ಸಾಮರ್ಥ್ಯ ಪರೀಕ್ಷೆ –ಭಾಗ 4

ಇಲ್ಲಿ, ಎಡಬದಿಗೆ ಮೂರು ಪ್ರಶ್ನೆ ರೂಪದ ಆಕೃತಿಗಳನ್ನು ಕೊಡಲಾಗಿರುತ್ತದೆ ಹಾಗೂ ನಾಲ್ಕನೆಯ ಆಕೃತಿಯ ಸ್ಥಾನವನ್ನು ಖಾಲಿ ಬಿಡಲಾಗಿರುತ್ತದೆ. ಈ ಪ್ರಶ್ನೆಯ ಆಕೃತಿಗಳು ಯಾವುದೋ ಒಂದು ಶ್ರೇಣಿಯಲ್ಲಿರುತ್ತವೆ. ಬಲ ಭಾಗದಲ್ಲಿ ಉತ್ತರ ರೂಪದಲ್ಲಿ ಕೊಟ್ಟಿರುವ A,B,C,D ಆಕೃತಿಗಳಲ್ಲಿ ಯಾವುದೋ ಒಂದು ಆಕೃತಿಯು ಪ್ರಶ್ನೆಯಲ್ಲಿರುವ ಖಾಲಿ ಜಾಗಕ್ಕೆ ಸರಿಯಾಗಿ ಹೊಂದಿಕೊಳ್ಳುವ ಚಿತ್ರವಾಗಿರುತ್ತದೆ. ಆ ಸರಿಯಾದ ಚಿತ್ರವನ್ನು ಕಂಡುಹಿಡಿದು ಉತ್ತರಿಸಬೇಕು.

ಉದಾಹರಣೆಗೆ,

ಇಲ್ಲಿ, ಎಡಭಾಗದ ಪ್ರಶ್ನೆಯಲ್ಲಿ ಮೂರು ಚಿತ್ರಗಳಿವೆ ಹಾಗೂ ಬಲಭಾಗದಲ್ಲಿ ಉತ್ತರದ ಆಯ್ಕೆಗಳಾಗಿ ( A,B,C, D ) ನಾಲ್ಕು ಚಿತ್ರಗಳಿವೆ.

ಎಡಭಾಗದ ಪ್ರಶ್ನೆಯಲ್ಲಿನ ಮೂರು ಚಿತ್ರಗಳನ್ನು ಗಮನಿಸಿದರೆ, ಈ ಚಿತ್ರಗಳು ಚಕ್ರಾಕಾರವಾಗಿ ತಿರುಗುತ್ತಿವೆ ಎಂದು ತಿಳಿಯಬಹುದು ಅಲ್ಲವೇ? ಹಾಗೂ ಪ್ರತಿ ಚಲನೆಯಲ್ಲೂ ಒಂದು ನಿರ್ದಿಷ್ಟ ಬದಲಾವಣೆಯಾ ಗುತ್ತಿರುವುದು ಗೋಚರವಾಗುತ್ತದೆ.

ಮೊದಲನೆಯ ಚಿತ್ರದಲ್ಲಿ ಮೇಲೆ ಅರ್ಧ ವೃತ್ತದ ಒಳಗೆ ಒಂದು ಸಣ್ಣ ವೃತ್ತವಿದೆ, ಕೆಳಗೆ ಪಂಚಭುಜಾಕೃತಿಯ ಒಳಗೆ ಒಂದು x ಇದೆ. ಎರಡನೆಯ ಚಿತ್ರವು ಚಲಿಸಿ ಅರ್ಧವೃತ್ತವು ಕೆಳಗೆ ಬಂದಿದೆ ಹಾಗೂ ಪಂಚ ಭುಜಾಕೃತಿಯ ಒಳಗೆ ಎರಡು x x ಇವೆ. ಹಾಗೆಯೇ ಮೂರನೆಯ ಚಿತ್ರವೂ ಚಲಿಸಿದೆ ಹಾಗೂ ಪಂಚಭುಜಾಕೃತಿಯಲ್ಲಿ ಮೂರು x x x ಇವೆ. ಹಾಗಾದರೆ ಈ ಚಿತ್ರವು ಇದೇ ರೀತಿಯಲ್ಲಿ ಚಲಿಸಿದಾಗ ನಾಲ್ಕನೆಯ ಬಾರಿ ಏನಾಗಬೇಕು? ನಾಲ್ಕನೆಯ ಬಾರಿ, ಚಿತ್ರವು ಚಲಿಸಿ ಅರ್ಧವೃತ್ತಾಕಾರವು ಕೆಳಗೆ ಬರಬೇಕು ಹಾಗೂ ಪಂಚಭುಜಾಕೃತಿಯಲ್ಲಿ ನಾಲ್ಕು x x x x ಗಳಿರಬೇಕಾಗುತ್ತದೆ ಅಲ್ಲವೇ? (ಏಕೆಂದರೆ ಪ್ರತಿ ಚಲನೆಯಲ್ಲಿಯೂ ಒಂದೊಂದು x ಗಳು ಹೆಚ್ಚುತ್ತಿವೆ!) ಆದ್ದರಿಂದ ಸರಿ ಉತ್ತರ C. ಎಷ್ಟು ಸುಲಭವಾಗಿದೆ ಅಲ್ವಾ !

2. ಈ ಕೆಳಗಿನ ಪ್ರಶ್ನೆಗೆ ನೀವೇ ಉತ್ತರಿಸಬಹುದೇ?

ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಜಾಲತಾಣವನ್ನು ನೋಡಿ. https://navodaya.gov.in/nvs/en/Home1

(ಲೇಖಕರು: ನಿರ್ದೇಶಕರು, ಸ್ಮಾರ್ಟ್ ಸೆರೆಬ್ರಮ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು)

ಮುಂದುವರಿಯುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.