ADVERTISEMENT

ನೀನು ಅಷ್ಟೊಂದು ಸೆಕ್ಸಿ ಹೇಗೆ? ಎಂದ ಅರ್ಜುನ್ ಕಪೂರ್‌ಗೆ ರಣವೀರ್ ಕೊಟ್ಟ ಉತ್ತರ...

ಐಎಎನ್ಎಸ್
Published 19 ಸೆಪ್ಟೆಂಬರ್ 2021, 5:45 IST
Last Updated 19 ಸೆಪ್ಟೆಂಬರ್ 2021, 5:45 IST
ರಣವೀರ್ ಸಿಂಗ್ ಹಾಗೂ ಅರ್ಜುನ್ ಕಪೂರ್
ರಣವೀರ್ ಸಿಂಗ್ ಹಾಗೂ ಅರ್ಜುನ್ ಕಪೂರ್   

ಬೆಂಗಳೂರು: ಬಾಲಿವುಡ್ ತಾರಾ ದಂಪತಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅಭಿಮಾನಿಗಳ ಜೊತೆ ಹೆಚ್ಚು ಸಂಪರ್ಕದಲ್ಲಿರುತ್ತಾರೆ. ಅದರಲ್ಲೂ ಈ ವಿಚಾರದಲ್ಲಿ ರಣವೀರ್ ಒಂದು ಕೈ ಮೇಲು.

ಮೂರೂವರೆ ಕೋಟಿ ಫಾಲೋವರ್ಸ್‌ಗಳನ್ನು ಹೊಂದಿರುವ ರಣವೀರ್ ಅವರು ನಿನ್ನೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳ ಜೊತೆ ಲೈವ್ ಬಂದಿದ್ದರು. ಈ ವೇಳೆ ಅವರು ‘ಏನು ಬೇಕಾದರೂ ಕೇಳಿ‘ ಎಂದು ಹೇಳಿದ್ದರು.

ಇದೇ ವೇಳೆ ದೀಪಿಕಾ ಪಡುಕೋಣೆ ಪತಿಯ ಕಾಲೆಳೆದು ‘ಮನೆಗೆ ಯಾವಾಗ ಬರ್ತಿಯಾ ಚಿನ್ನ‘? ಎಂದು ಕೇಳಿದ್ದಾರೆ. ಇದಕ್ಕೆ ಅಷ್ಟೇ ತುಂಟತನದಿಂದ ಉತ್ತರ ಕೊಟ್ಟ ರಣವೀರ್, ‘ಚಿನ್ನ ನೀನು ಬಿಸಿ ಬಿಸಿ ಅಡುಗೆ ತಯಾರಿ ಮಾಡು, ನಾನು ಇವಾಗ ಬರ್ತಾ ಇದೀನಿ‘ ಎಂದು ಹೇಳಿ ಕಿಸ್ ಇಮೋಜಿ ಕಳಿಸಿದ್ದಾರೆ.

ADVERTISEMENT

ಅನೇಕ ಸೆಲೆಬ್ರಿಟಿಗಳು ಕೂಡ ರಣವೀರ್ ಅವರ ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸಿ ರಣವೀರ್‌ಗೆ ಕಾಲೆಳೆದು ಪ್ರಶ್ನೆ ಕೇಳಿದ್ದಾರೆ. ನಟ ಟೈಗರ್ ಶ್ರಾಫ್, ಅರ್ಜುನ್ ಕಪೂರ್ ಪ್ರಶ್ನೆ ಕೇಳಿದ್ದಾರೆ.

‘ನೀನು ಅಷ್ಟೊಂದು ಸೆಕ್ಸಿ ಇದಿಯಾ. ಹೇಗೆ ಬಾಬಾ’ಎಂದು ನಟ ಅರ್ಜುನ್ ಕಪೂರ್ ಕೇಳಿದ ಪ್ರಶ್ನೆಗೆ, ‘ಎಲ್ಲಾ ನೀನು ಕೊಟ್ಟ ತರಬೇತಿ ಕಣೋ’ಎಂದು ರಣವೀರ್ ಅರ್ಜುನ್ ಕಪೂರ್‌ಗೆ ಉತ್ತರ ಕೊಟ್ಟಿದ್ದಾರೆ.

ಇನ್‌ಸ್ಟಾಗ್ರಾಂ ಬಳಕೆದಾರನೊಬ್ಬ ‘ನಿಮ್ಮ ಪತ್ನಿ ಬಗ್ಗೆ ಒಂದೇ ಒಂದು ಮಾತು ಹೇಳಬಹುದಾದರೆ? ಎಂದು ಕೇಳಿದ ಪ್ರಶ್ನೆಗೆ, ‘ಅವಳು ನನ್ನ ರಾಣಿ’ಎಂದು ರಣವೀರ್ ಉತ್ತರಿಸಿದ್ದಾರೆ. ಹೀಗೆ ಸುಮಾರು ಅರ್ಧ ಗಂಟೆ ರಣವೀರ್ ಕೇಳುಗರ ಪ್ರಶ್ನೆಗೆ ತುಂಟತನದ ಹಾಗೂ ನೇರ ಉತ್ತರ ಕೊಟ್ಟು ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

ಸದ್ಯ 1983 ರಲ್ಲಿ ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದಿರುವ ಹಾಗೂ ಕಪಿಲ್ ದೇವ್ ಕುರಿತು ಕಥೆ ಹೊಂದಿರುವ ಮುಂಬರುವ ‘83‘ ಸಿನಿಮಾದಲ್ಲಿ ರಣವೀರ್ ಹಾಗೂ ದೀಪಿಕಾ ಒಟ್ಟಾಗಿ ಅಭಿನಯಿಸಿದ್ದಾರೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.