ADVERTISEMENT

ಅ. 8ಕ್ಕೆ ‘ಬಾಬು ಮಾರ್ಲಿ’ ತೆರೆಗೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 19:30 IST
Last Updated 24 ಸೆಪ್ಟೆಂಬರ್ 2021, 19:30 IST
ಮೀನಾಕ್ಷಿ ದೀಕ್ಷಿತ್, ಅವಿನಾಶ್‌ ಸಂಪತ್‌
ಮೀನಾಕ್ಷಿ ದೀಕ್ಷಿತ್, ಅವಿನಾಶ್‌ ಸಂಪತ್‌   

‘ಬಾಬು ಮಾರ್ಲಿ’ ಚಿತ್ರ ಅಕ್ಟೋಬರ್‌ 8ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕ್ರೀಡಾ ವಿಷಯ ಆಧಾರಿತ ಚಿತ್ರವಿದು.

ವಾಲಿಬಾಲ್ ಆಟಗಾರನೊಬ್ಬನ ಜೀವನದಲ್ಲಿ ನಡೆದ ಘಟನೆಗಳನ್ನಾಧರಿಸಿ ನಿರ್ಮಾಣವಾಗಿರುವ ಚಿತ್ರವಿದು.

ಅವಿನಾಶ್ ಸಂಪತ್ ಈ ಚಿತ್ರದ ನಾಯಕ. ವಾಲಿಬಾಲ್‌ ಆಟಗಾರ ಬಾಬು ಹೆಸರಿನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಬೆಡಗಿ ಮೀನಾಕ್ಷಿ ದೀಕ್ಷಿತ್ ನಾಯಕಿ.

ADVERTISEMENT

ಬಾಬು ಕಾಲಕ್ರಮೇಣ ಮಾದಕದ್ರವ್ಯ ವ್ಯಸನಿಯಾಗುತ್ತಾನೆ. ನಂತರ ಅವನ ಜೀವನದ ಹಾದಿಯೇ ಬೇರೆಯಾಗುತ್ತದೆ. ಆನಂತರ ಸ್ನೇಹದ ಸುಳಿಯಲ್ಲಿ ಸಿಲುಕುವ ನಾಯಕ ಮೊದಲಿನಂತಾಗುತ್ತಾನೆ. ಆಟದಲ್ಲಿ ಉತ್ತಮ ಹೆಸರು ಗಳಿಸುತ್ತಾನೆ. ಇದೇ ಚಿತ್ರದ ಪ್ರಮುಖ ಕಥಾವಸ್ತು. ಬರೀ ಕ್ರೀಡೆ ಅಷ್ಟೇ ಅಲ್ಲ. ಪ್ರೇಮಕಥೆಯೂ ಈ ಚಿತ್ರದಲ್ಲಿದೆ. ಇದೊಂದು ಯುವಜನತೆಯ ಮನಸ್ಸಿಗೆ ಹೇಳಿ ಮಾಡಿಸಿದ ಕಥಾವಸ್ತು ಎಂದಿದೆ ಚಿತ್ರತಂಡ.

ಊಟಿ, ಬೆಂಗಳೂರಿನಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಮಾಹಿ ಜಿ.ವೈ.ಕೆ ಈ ಚಿತ್ರದ ನಿರ್ದೇಶಕರು. ಇವರೇ ಕಥೆ ಚಿತ್ರಕಥೆ ಬರೆದಿದ್ದಾರೆ. ಜಗನ್ಮೋಹನ್ ಫಿಲಂಸ್ ಲಾಂಛನದಲ್ಲಿ ಜಗನ್ಮೋಹನ ರಾವ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಕೃತಿಕಾ ಈ ಚಿತ್ರದ ಸಹ ನಿರ್ಮಾಪಕರು.

ತ್ರಿವೇಣಿ (ಟಗರು ಸರೋಜ), ಸಾರಿಕಾ, ಕಿಲ್ಲರ್ ವೆಂಕಟೇಶ್, ಅಶೋಕ್, ಶಿಲ್ಪ, ಪೂಜಾ ಈ ಚಿತ್ರದಲ್ಲಿದ್ದಾರೆ. ಐದು ಹಾಡುಗಳಿವೆ. ಎಂ.ಸಿ.ಬಿಜು, ರಾಹುಲ್ ಡಿಟೊ ಹಾಗೂ ಎಸ್ ಐ ಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಖ್ಯಾತ್ ನಾರಾಯಣ್ ಛಾಯಾಗ್ರಹಣ, ಬಿಪಿನ್ಪಾಲ್ ಸಾಮುಯಲ್, ವಿಷ್ಣು ಮಾನಿಕ್, ಜಾರ್ಜ್ ಸಂಕಲನ ಹಾಗೂ ನೀರ್ಜಾ ರಾಕಿಲ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ರಾಮಕೃಷ್ಣ ರಣಗಟ್ಟಿ ಸಂಭಾಷಣೆ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.