ADVERTISEMENT

ಸನ್ ಡೇಸ್‌ಗಾಗಿ ಎದುರು ನೋಡುತ್ತಿರುವ ನಟಿ ಇಲಿಯಾನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಸೆಪ್ಟೆಂಬರ್ 2021, 10:59 IST
Last Updated 22 ಸೆಪ್ಟೆಂಬರ್ 2021, 10:59 IST
ನಟಿ ಇಲಿಯಾನಾ ಇನ್‌ಸ್ಟಾಗ್ರಾಂ ಪೋಸ್ಟ್
ನಟಿ ಇಲಿಯಾನಾ ಇನ್‌ಸ್ಟಾಗ್ರಾಂ ಪೋಸ್ಟ್    

ಬೆಂಗಳೂರು: ಬಾಲಿವುಡ್ ನಟಿ ಇಲಿಯಾನಾ ಡಿ ಕ್ರೂಜ್ ಸಾಮಾಜಿಕ ತಾಣಗಳಲ್ಲಿ ಆಕ್ಟಿವ್ ಆಗಿರುತ್ತಾರೆ.

ಜತೆಗೆ ಪ್ರವಾಸ ಹೋಗುವುದು, ಬೀಚ್‌ ಫೋಟೊಗಳನ್ನು ಅಪ್‌ಲೋಡ್ ಮಾಡುವುದು ಕೂಡ ಅವರಿಗೆ ಅಚ್ಚುಮೆಚ್ಚು. ಹೀಗಾಗಿ ಇಲಿಯಾನಾ ಅವರಿಗೆ ಸಾಮಾಜಿಕ ತಾಣಗಳಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಇಲಿಯಾನಾ ಈ ಬಾರಿ ಮತ್ತೆ ಯಾವಾಗ ಸನ್ ಡೇಸ್ಬರುತ್ತದೆ ಎನ್ನುವ ಪ್ರಶ್ನೆಯನ್ನು ಕೇಳಿ, ಬೀಚ್‌ನಲ್ಲಿ ಸನ್‌ಬಾತ್ ಮಾಡುತ್ತಿರುವ ಫೋಟೊ ಒಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

ಇಲ್ಲಿ ಸನ್ ಎಂದಿರುವುದು ಭಾನುವಾರಕ್ಕೂ ಅಥವಾ ಸೂರ್ಯನಿಗೋ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಉಂಟಾಗಿದೆ. ಆದರೆ ಇಲಿಯಾನಾ ಮಾತ್ರ, ಮತ್ತೊಮ್ಮೆ ಯಾವಾಗ ಈ ರೀತಿಯ ದಿನಗಳು, ಪ್ರವಾಸದ ಕ್ಷಣಗಳು ಬರುತ್ತವೋಎಂದು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.