ADVERTISEMENT

ರಕ್ಷಿತ್‌ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾ ಡಿ.31ಕ್ಕೆ ತೆರೆಗೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 7:00 IST
Last Updated 9 ಸೆಪ್ಟೆಂಬರ್ 2021, 7:00 IST
777 ಚಾರ್ಲಿ ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ 
777 ಚಾರ್ಲಿ ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ    

ನಟ ರಕ್ಷಿತ್‌ ಶೆಟ್ಟಿ ಅಭಿನಯದ ‘777ಚಾರ್ಲಿ’ ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ 2021ರ ಡಿ.31ರಂದು ತೆರೆ ಕಾಣಲಿದೆ.

ಕಿರಣ್‌ ರಾಜ್‌ ಕೆ. ನಿರ್ದೇಶನದ ಈ ಚಿತ್ರದ ಮೊದಲ ವಿಡಿಯೊ ಹಾಡು ‘ಹೆಂಗೋ ಇದ್ದ ಧರ್ಮ, ತಗಲ್ಲಾಕ್ಕೋತು ಕರ್ಮ..’ ಗುರುವಾರ ಬಿಡುಗಡೆಯಾಗಿದ್ದು, 6 ನಿಮಿಷಗಳ ಹಾಡಿನಲ್ಲಿಧರ್ಮ ಮತ್ತು ಚಾರ್ಲಿ ನಡುವೆ ನಡೆಯಲಿರುವ ಟಾಮ್‌ ಆ್ಯಂಡ್‌ ಜೆರಿ ಆಟ, ಧರ್ಮನಿಗೆ ಚಾರ್ಲಿ ನೀಡುವ ಚಿತ್ರಹಿಂಸೆಯನ್ನು ಸೆರೆಹಿಡಿಯಲಾಗಿದೆ.ಜಿ.ಎಸ್‌.ಗುಪ್ತ ಹಾಗೂ ರಕ್ಷಿತ್‌ ಶೆಟ್ಟಿ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.ಸಂಗೀತಾ ಶೃಂಗೇರಿ ಚಿತ್ರದ ನಾಯಕಿ. ಚಿತ್ರದಲ್ಲಿ ನಟ, ನಿರ್ದೇಶಕ ರಾಜ್‌ ಬಿ.ಶೆಟ್ಟಿ, ಡ್ಯಾನಿಶ್‌ ಸೇಟ್‌ ತಾರಾಗಣದಲ್ಲಿದ್ದಾರೆ.

ರಕ್ಷಿತ್‌ ಶೆಟ್ಟಿ ಅಭಿನಯದ ‘ಕಿರಿಕ್‌ ಪಾರ್ಟಿ’, ‘ಅವನೇ ಶ್ರೀಮನ್ನಾರಾಯಣ’ ಚಿತ್ರವೂ ವರ್ಷದ ಕೊನೆಯ ಶುಕ್ರವಾರ ಬಿಡುಗಡೆಯಾಗಿತ್ತು. ಈ ವರ್ಷದ ಕೊನೆಯ ಶುಕ್ರವಾರ(ಡಿ.31)ಹೇಮಂತ್‌ ಎಂ.ರಾವ್‌ ನಿರ್ದೇಶನದಲ್ಲಿ ಮೂಡಿಬಂದಿರುವ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಬಿಡುಗಡೆಗೆ ರಕ್ಷಿತ್‌ ಶೆಟ್ಟಿ ಅವರು ಮೊದಲು ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ಸೆಪ್ಟೆಂಬರ್‌– ಅಕ್ಟೋಬರ್‌ನಲ್ಲೇ ‘777 ಚಾರ್ಲಿ’ ಬಿಡುಗಡೆಗೆ ನಿರ್ಧರಿಸಲಾಗಿತ್ತು. ಆದರೆ ಲಾಕ್‌ಡೌನ್‌ ಹಾಗೂ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ನಿರ್ಬಂಧದ ಕಾರಣದಿಂದಾಗಿ ಬಿಗ್‌ಬಜೆಟ್‌ ಚಿತ್ರಗಳ ಬಿಡುಗಡೆ ವಿಳಂಬವಾಗಿದೆ. ಈ ಕಾರಣದಿಂದಾಗಿ ಡಿಸೆಂಬರ್‌ ಅಂತ್ಯಕ್ಕೆ ‘777 ಚಾರ್ಲಿ’ ಬಿಡುಗಡೆಗೆ ರಕ್ಷಿತ್‌ ನಿರ್ಧರಿಸಿದ್ದಾರೆ. ಹೀಗಾಗಿ ‘ಸಪ್ತ ಸಾಗರದಾಚೆ ಎಲ್ಲೋ’ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.