ADVERTISEMENT

ಚಳಿಗಾಲಕ್ಕೆ ಹೆದರದಿರಿ!

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2018, 19:30 IST
Last Updated 26 ನವೆಂಬರ್ 2018, 19:30 IST

ಚಳಿಗಾಲ ಶುರುವಾಗಿದೆ. ಈ ಚಳಿಗಾಲ ಹೆಚ್ಚು ನಡುಕ ಹುಟ್ಟಿಸುವುದು ಸೌಂದರ್ಯ ಪ್ರಿಯರಿಗೆ. ಅತಿಯಾದ ಬ್ಯೂಟಿ ಕಾಂಷಿಯಸ್ ಇರುವವರು ಚಳಿಗಾಲಕ್ಕೆ ಭಯ ಪಡುತ್ತಾರೆ. ಕಾರಣಚರ್ಮಕ್ಕೂ ಚಳಿಗೂ ಅಷ್ಟಾಗಿ ಆಗಿಬರಲ್ಲ. ಚಳಿಯು ಚರ್ಮದ ಅಂದಗೆಡಿಸಿ ಸೌಂದರ್ಯವನ್ನು ಕುಗ್ಗಿಸುತ್ತದೆ.

ಡ್ರೈ ಸ್ಕಿನ್ ಸಮಸ್ಯೆ ಕಾಣಿಸಿಕೊಳ್ಳುವುದು ಚಳಿಗಾಲದಲ್ಲಿ ಹೆಚ್ಚು. ದೇಹದಲ್ಲಿ ತೇವಾಂಶಕಡಿಮೆಯಾಗಿ ಚರ್ಮವು ಕಪ್ಪಾಗುತ್ತದೆ. ಪಾದಗಳ ಬಿರುಕಿನ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯು ಚಳಿಗಾಲದ ಅಂತ್ಯದವರೆಗೂ ನಮ್ಮನ್ನು ಬೆನ್ನಟ್ಟುತ್ತದೆ. ಇದರಿಂದ ಕೊಂಚ ನಿರಾಳರಾಗಲು ಹೀಗೆ ಮಾಡಬಹುದು.

ತೆಂಗಿನಎಣ್ಣೆ

ADVERTISEMENT

ಕಾಂತಿಹೀನವಾಗಿ ಕಾಣುವ ಚರ್ಮದ ಭಾಗಕ್ಕೆ ತೆಂಗಿನಎಣ್ಣೆ ಹಚ್ಚುವುದರಿಂದ ಡಲ್‌ನೆಸ್ ಕಡಿಮೆಯಾಗುತ್ತದೆ. ಚರ್ಮ ಒಣಗಿದಂತೆ ಕಾಣುವುದನ್ನು ತಡೆಯಬಹುದು. ತೆಂಗಿನಎಣ್ಣೆಯನ್ನು ಚರ್ಮಕ್ಕೆ ಹಚ್ಚಿ ಮಸಾಜ್ ಮಾಡಿದ ಬಳಿಕ ಸ್ನಾನ ಮಾಡಿದರೆ ಡ್ರೈಸ್ಕಿನ್ ಸಮಸ್ಯೆ ನಿವಾರಣೆಯಾಗುತ್ತದೆ.

ತುಪ್ಪ

ತುಪ್ಪ ಮತ್ತು ಬೆಣ್ಣೆ ಚರ್ಮಕ್ಕೆ ತೇವಾಂಶ ಒದಗಿಸುತ್ತವೆ. ಮುಖ, ತುಟಿ ಹಾಗೂ ಕೈ ಕಾಲುಗಳಿಗೆ ತುಪ್ಪ ಹಚ್ಚಿ, ಸ್ವಲ್ಪ ಹೊತ್ತಿನ ನಂತರ ಸ್ನಾನ ಮಾಡಿದರೆ ಚರ್ಮ ಒಣಗುವುದು ನಿಲ್ಲುತ್ತದೆ.

ಹಾಲಿನ ಕೆನೆ

ಹಾಲು ಮತ್ತು ಹಾಲಿನ ಕೆನೆಯಲ್ಲಿ ನೈಸರ್ಗಿಕ ಮಾಯಿಶ್ಚರೈಸರ್ಸ್ ಇವೆ. ಕೆನೆಯನ್ನು ಚರ್ಮಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮ ಮೃದುವಾಗುತ್ತದೆ. ಅಲ್ಲದೇ ಚರ್ಮವನ್ನು ಡ್ರೈ ಆಗದಂತೆ ತಡೆಯುತ್ತದೆ.

ಜೇನುತುಪ್ಪ

ಜೇನುತುಪ್ಪವನ್ನು ನಾನಾ ಫೇಸ್‌ಫ್ಯಾಕ್‌ಗಳಿಗೆ ಬಳಸಲಾಗುತ್ತದೆ. ವಾರದಲ್ಲಿ ಮೂರು ಬಾರಿ ನಿಮ್ಮ ಮುಖ ಮತ್ತು ತೋಳುಗಳ ಮೇಲೆ ಜೇನುತುಪ್ಪವನ್ನು ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ ಆರೋಗ್ಯಕ್ಕಷ್ಟೇ ಅಲ್ಲ ಚರ್ಮದ ಕಾಂತಿಗೂ ಸಹಕಾರಿ. ಹಾಲು ಅಥವಾ ಜೇನುತುಪ್ಪದೊಂದಿಗೆ ಆಲಿವ್ ಆಯಿಲ್ ಬೆರೆಸಿ ಮುಖಕ್ಕೆ ಹಚ್ಚಿದರೆ ಡ್ರೈನೆಸ್ ಕಡಿಮೆಯಾಗುತ್ತದೆ.

ಸೋಪ್ ಬಳಕೆ ಬೇಡ

ಎಷ್ಟೇ ಆರೈಕೆ ಮಾಡಿದರೂ ಚಳಿಗಾಲದಲ್ಲಿ ಚರ್ಮದ ಕಾಂತಿ ಕುಗ್ಗುವುದು ಸಹಜ. ಕೆಲವುಕ್ರೀಮ್‌ಗಳನ್ನು ಬಳಸಿದರಂತೂ ಇರುವ ಕಾಂತಿಯನ್ನೂ ಚರ್ಮ ಕಳೆದು ಕೊಳ್ಳುತ್ತದೆ. ತ್ವಚೆಯ ಆರೋಗ್ಯ ಕಾಪಾಡಲು ದುಬಾರಿ ಕ್ರೀಮ್‌ಗಳನ್ನು ಬದಿಗೊತ್ತಿ. ಸೋಪ್ ಬಳಕೆಯನ್ನು ಕಡಿಮೆ ಮಾಡಿ.ಅದರ ಬದಲು ಕಡಲೆಹಿಟ್ಟನ್ನು ಮುಖಕ್ಕೆ ಆಗಾಗ ಬಳಸಿ. ಪಪ್ಪಾಯಿ, ಮಾವು, ಬಾಳೆಹಣ್ಣಿನ ಸಿಪ್ಪೆಗಳಿಂದ ಮುಖವನ್ನು ಚೆನ್ನಾಗಿ ಮಸಾಜ್ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.