ADVERTISEMENT

ಶಾರೂಖ್‌ ಮನೆಯಲ್ಲಿ ಗಣೇಶ ಹಬ್ಬ: ಫೋಟೊ ಹಂಚಿಕೊಂಡ ಬಾದ್‌ಶಾ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 11:26 IST
Last Updated 20 ಸೆಪ್ಟೆಂಬರ್ 2021, 11:26 IST
ಶಾರೂಖ್‌
ಶಾರೂಖ್‌    

ಬಾಲಿವುಡ್‌ ಬಾದ್‌ಶಾ ಶಾರೂಖ್‌ ಖಾನ್‌ ತಮ್ಮ ಮನೆಯಲ್ಲಿ ಗಣೇಶ ಹಬ್ಬ ಆಚರಸಿದ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಶಾರುಖ್ ಖಾನ್ ತಮ್ಮ ಮನೆಯಲ್ಲಿ ಹಲವು ಹಿಂದೂ ಹಬ್ಬಗಳನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಪ್ರತಿ ವರ್ಷವೂ ಅವರು ತಪ್ಪದೇಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಮನೆಯಲ್ಲಿ ಗಣಪತಿಯನ್ನು ತಂದು ಕೂರಿಸಿ ವಿಶೇಷ ಪೂಜೆ ಮಾಡಿ ಗಣೇಶನ ಆರಾಧನೆ ಮಾಡುತ್ತಾರೆ. ಗಣೇಶನ ವಿಸರ್ಜನೆ ಮಾಡುವ ಮೊದಲು ಗಣಪನಿಗೆ ನಮಸ್ಕರಿಸುತ್ತಾರೆ. ನಂತರ ಆ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.

ADVERTISEMENT

ಟ್ವಿಟರ್‌ನಲ್ಲಿಗಣೇಶನ ಫೋಟೊವನ್ನು ಹಂಚಿಕೊಂಡು, ಗಣಪತಿ ಎಲ್ಲರಿಗೂ ಒಳ್ಳೆಯದು ಮಾಡಲಿ, ನಮ್ಮ ಮೇಲೆ ಅಶಿರ್ವಾದ ಇರಲಿ ಎಂದು ಶಾರುಖ್ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.