ADVERTISEMENT

‘ಮಿಷನ್ ಮಜ್ನು’ ಜತೆ ಭರ್ಜರಿ ಪಾರ್ಟಿ ಮಾಡಿದ ರಶ್ಮಿಕಾ ಮಂದಣ್ಣ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 5:59 IST
Last Updated 15 ಸೆಪ್ಟೆಂಬರ್ 2021, 5:59 IST
ಸಿದ್ದಾರ್ಥ್, ರಶ್ಮಿಕಾ
ಸಿದ್ದಾರ್ಥ್, ರಶ್ಮಿಕಾ   

ಟಾಲಿವುಡ್‌ನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದು ಮೊದಲ ಸಿನಿಮಾದ ಚಿತ್ರೀಕರಣವನ್ನು ಪೂರ್ತಿಗೊಳಿಸಿದ್ದಾರೆ.

ರಶ್ಮಿಕಾ ನಟನೆಯ ಮೊದಲ ಬಾಲಿವುಡ್ ಚಿತ್ರ ‘ಮಿಷನ್ ಮಜ್ನು’. ಈ ಚಿತ್ರದಲ್ಲಿಸಿದ್ಧಾರ್ಥ ಮಲ್ಹೋತ್ರಾ ಅವರಿಗೆ ನಾಯಕಿಯಾಗಿ ರಶ್ಮಿಕಾ ನಟಿಸಿದ್ದಾರೆ.

ಮಿಷನ್‌ ಮಜ್ನು ಚಿತ್ರತಂಡದವರು ಚಿತ್ರೀಕರಣ ಮುಗಿಸಿದ ಖುಷಿಯಲ್ಲಿ ಕೇಕ್ ಕತ್ತರಿಸಿ ಭರ್ಜರಿ ಪಾರ್ಟಿ ಮಾಡಿದ್ದಾರೆ. ಚಿತ್ರತಂಡ ಕೇಕ್ ಕತ್ತರಿಸುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ADVERTISEMENT

ಇದು ನನ್ನ ಮೊದಲ ಹಿಂದಿ ಚಿತ್ರ, ಚಿತ್ರೀಕರಣ ಸಮಯದಲ್ಲಿ ನಾನು ತಂಡದೊಂದಿಗೆ ಸಂತಸದ ಸಮಯವನ್ನು ಕಳೆದಿದ್ದೇನೆ. ಸ್ಕ್ರಿಪ್ಟ್ ಕೇಳಿದ ಮೊದಲ ದಿನವೇ ನಾನು ಈ ಚಿತ್ರದ ಭಾಗವಾಗಬೇಕು ಎಂದು ಅನಿಸಿತ್ತು ಎಂದು ರಶ್ಮಿಕಾ ಕೆಲವು ದಿನಗಳ ಹಿಂದೆ ಟ್ವೀಟ್‌ ಮಾಡಿದ್ದರು.

ರಶ್ಮಿಕಾ ಮತ್ತೊಂದು ಬಾಲಿವುಡ್‌ ಸಿನಿಮಾ ’ಗುಡ್‌ ಬೈ‘ ಚಿತ್ರದಲ್ಲಿ ನಟಿಸಲು ಸಹಿ ಹಾಕಿದ್ದಾರೆ. ಇದರ ಚಿತ್ರೀಕರಣ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.

ಶಂತನು ಬಾಗ್ಚಿ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಪರ್ಮೀತ್ ಸೇಠಿ, ಝಾಕಿರ್ ಹುಸೇನ್, ಶರೀಬ್ ಹಷ್ಮಿ ಸೇರಿದಂತೆ ಹಲವರು ನಟಿಸಿದ್ದಾರೆ.

ಮಿಷನ್‌ ಮಜ್ನು ಸಿನಿಮಾವನ್ನು ರೂನಿ ಸೋಲಿ, ಅಮರ್ ಬುಟಾಲಾ ಹಾಗೂ ಗರಿಮಾ ಮೆಹ್ತಾ ನಿರ್ಮಾಣ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.