ADVERTISEMENT

ನಿಖಿಲ್- ರೇವತಿ ದಂಪತಿಗೆ ಗಂಡು ಮಗು ಜನನ: ಕುಮಾರಸ್ವಾಮಿ ಮನೆಯಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 9:04 IST
Last Updated 24 ಸೆಪ್ಟೆಂಬರ್ 2021, 9:04 IST
ಮಗುವಿನೊಂದಿಗೆ ನಿಖಿಲ್ ಕುಮಾರಸ್ವಾಮಿ
ಮಗುವಿನೊಂದಿಗೆ ನಿಖಿಲ್ ಕುಮಾರಸ್ವಾಮಿ   

ಬೆಂಗಳೂರು: ನಟ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿಗೆ ಶುಕ್ರವಾರ 1.05 ಗಂಟೆ ವೇಳೆಗೆ ಗಂಡು ಮಗು ಜನಿಸಿದೆ‌. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯದಿಂದ ಇದ್ದಾರೆ.

ಮಗುವಿನ ಆಗಮನದಿಂದ ಎಚ್.ಡಿ. ಕುಮಾರಸ್ವಾಮಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ತಾತನಾದ ಖುಷಿಯಲ್ಲಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಮೊಮ್ಮಗನಿಗೆ ಆಶೀರ್ವದಿಸುವಂತೆ ಕೋರಿದ್ದಾರೆ.

2020ರ ಏಪ್ರಿಲ್‌ನಲ್ಲಿನಿಖಿಲ್ –ರೇವತಿವಿವಾಹ ನೆರವೇರಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.