ADVERTISEMENT

ದಿ ಆಕ್ಟಿವಿಸ್ಟ್ ಶೋ: ಭಾಗವಹಿಸಿದ್ದಕ್ಕೆ ಕ್ಷಮೆಯಾಚಿಸಿದ ಪ್ರಿಯಾಂಕಾ ಚೋಪ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಸೆಪ್ಟೆಂಬರ್ 2021, 9:00 IST
Last Updated 17 ಸೆಪ್ಟೆಂಬರ್ 2021, 9:00 IST
ಶೋ ಒಂದರಲ್ಲಿ ಭಾಗವಹಿಸಿದ್ದ ನಟಿ ಪ್ರಿಯಾಂಕಾ ಚೋಪ್ರಾ ಅವರು ಕ್ಷಮೆಯಾಚಿಸಿದ್ದಾರೆ.
ಶೋ ಒಂದರಲ್ಲಿ ಭಾಗವಹಿಸಿದ್ದ ನಟಿ ಪ್ರಿಯಾಂಕಾ ಚೋಪ್ರಾ ಅವರು ಕ್ಷಮೆಯಾಚಿಸಿದ್ದಾರೆ.   

ಬೆಂಗಳೂರು: ‘ದಿ ಆ್ಯಕ್ಟಿವಿಸ್ಟ್’ ಶೋದಲ್ಲಿ ಭಾಗವಹಿಸಿದ ವಿಚಾರ ವಿವಾದ ಸೃಷ್ಟಿಸುತ್ತಲೇ ನಟಿ ಪ್ರಿಯಾಂಕಾ ಚೋಪ್ರಾ ಕ್ಷಮೆಯಾಚಿಸಿದ್ದಾರೆ.

ಶೋ ಹೋಸ್ಟ್‌ಗಳಲ್ಲಿ ಒಬ್ಬರಾಗಿದ್ದ ನಟಿ ಪ್ರಿಯಾಂಕ ಚೋಪ್ರಾ, ಇಂಟರ್‌ನೆಟ್‌ನಲ್ಲಿ ಜನರಿಂದ ಭಾರೀ ಟೀಕೆ ಎದುರಿಸಿದ್ದರು. ಆರಂಭದಲ್ಲಿ ರಿಯಾಲಿಟಿ ಸ್ಪರ್ಧೆಯ ರೂಪದಲ್ಲಿದ್ದ ‘ದಿ ಆಕ್ಟಿವಿಸ್ಟ್’ ಶೋ, ನಂತರದಲ್ಲಿ ಸ್ವರೂಪ ಬದಲಾಯಿಸಿಕೊಂಡಿತ್ತು ಎಂಬ ಆರೋಪ ಕೇಳಿಬಂದಿತ್ತು.

ಜನರಿಂದ ಪ್ರತಿರೋಧ ಮತ್ತು ಸಾಮಾಜಿಕ ತಾಣಗಳಲ್ಲಿ ಟೀಕೆ ಕೇಳಿಬಂದ ಬಳಿಕ, ದಿ ಆಕ್ಟಿವಿಸ್ಟ್ ಶೋ ಸ್ವರೂಪದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಕಾರ್ಯಕ್ರಮ ಆಯೋಜಕರು ಹೇಳಿದ್ದಾರೆ.

ADVERTISEMENT

ಪ್ರಿಯಾಂಕ ಚೋಪ್ರಾ, ಉಶೆರ್ ಮತ್ತು ಜ್ಯೂಲಿಯಾನ್ ಹಾಗ್ ಅವರು ದಿ ಆಕ್ಟಿವಿಸ್ಟ್ ಸರಣಿಯಲ್ಲಿ ತೀರ್ಪುಗಾರರಾಗಿ ಪಾಲ್ಗೊಳ್ಳುತ್ತಿದ್ದರು.

ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿರುವುದು ಹಲವರಿಗೆ ಬೇಸರವುಂಟುಮಾಡಿದೆ. ಅದಕ್ಕಾಗಿ ನಾನು ನಿಮ್ಮೆಲ್ಲರ ಕ್ಷಮೆ ಕೇಳುತ್ತಿದ್ದೇನೆ ಎಂದು ಪ್ರಿಯಾಂಕಾ ಅವರು ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.