ADVERTISEMENT

ಹೊಂಬಾಳೆ ಫಿಲಂಸ್: 'ರಾಘವೇಂದ್ರ ಸ್ಟೋರ್ಸ್’ಗೆ ಜಗ್ಗೇಶ್‌ ನಾಯಕ, ಸಂತೋಷ್‌ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 11:04 IST
Last Updated 22 ಸೆಪ್ಟೆಂಬರ್ 2021, 11:04 IST
ಪೋಸ್ಟರ್‌
ಪೋಸ್ಟರ್‌   

ಬೆಂಗಳೂರು:‘ಹೊಂಬಾಳೆ ಫಿಲಂಸ್’ ಸಂಸ್ಥೆಯ ಮುಖ್ಯಸ್ಥ ವಿಜಯ್ ಕಿರಗಂದೂರುತಮ್ಮ ಬ್ಯಾನರ್‌ ಅಡಿಯಲ್ಲಿ 12ನೇ ಚಿತ್ರವನ್ನುಘೋಷಣೆ ಮಾಡಿದ್ದಾರೆ.

ನವರಸ ನಾಯಕ ಜಗ್ಗೇಶ್‌ ನಾಯಕರಾಗಲಿದ್ದು,ಸಂತೋಷ್ ಆನಂದ್ ರಾಮ್ ನಿರ್ದೇಶನವಿರುವ ಈ ಚಿತ್ರಕ್ಕೆ 'ರಾಘವೇಂದ್ರ ಸ್ಟೋರ್ಸ್’ ಎಂದು ಹೆಸರಿಡಲಾಗಿದೆ.

ಈ ಸಿನಿಮಾದ ಫಸ್ಟ್ ಲುಕ್ ಅನ್ನು ಹೊಂಬಾಳೆ ಫಿಲ್ಮ್ಸ್ ನಾನಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಪೋಸ್ಟರ್ ಗಮನಿಸಿದರೆ ಇದೊಂದು ಹೋಟೆಲ್ ಕುರಿತಾದ ಕಥೆ ಎಂದು ಮೇಲ್ಮೋಟಕ್ಕೆ ಗೊತ್ತಾಗುತ್ತಿದೆ.

ADVERTISEMENT

ಈಗಾಗಲೇ ಹೊಂಬಾಳೆಫಿಲ್ಮ್ಸ್ಸಾಲು ಸಾಲು ಚಿತ್ರಗಳನ್ನು ಘೋಷಣೆ ಮಾಡಿದ್ದುಆ ಸಾಲಿಗೆ'ರಾಘವೇಂದ್ರ ಸ್ಟೋರ್ಸ್’ ಕೂಡ ಸೇರ್ಪಡೆಯಾಗಿದೆ.

2014ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ‘ನಿನ್ನಿಂದಲೇ’ ಸಿನಿಮಾ ಮೂಲಕಹೊಂಬಾಳೆ ಫಿಲ್ಮ್ಸ್ ಸಿನಿಯಾನವನ್ನು ಆರಂಭಿಸಿತು. ನಂತರರಾಕಿಂಗ್ ಸ್ಟಾರ್ ಯಶ್ ನಟನೆಯ ‘ಮಾಸ್ಟರ್‌ ಪೀಸ್’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿತ್ತು.

2017ರಲ್ಲಿ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾದ ‘ರಾಜಕುಮಾರ’ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಕನ್ನಡ ಚಿತ್ರರಂಗದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ ‘ರಾಜಕುಮಾರ’ ಚಿತ್ರವೂ ಒಂದು ಎನಿಸಿಕೊಂಡಿತು. ನಂತರ ನಿರ್ಮಾಣವಾದ ಕೆಜಿಎಫ್‌ ಚಿತ್ರ ದೇಶದ ಗಮನ ಸೆಳೆಯುವ ಮೂಲಕ ಭರ್ಜರಿಕಲೆಕ್ಷನ್ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.