ADVERTISEMENT

₹22 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿದ ರಣವೀರ್‌–ದೀಪಿಕಾ ದಂಪತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಸೆಪ್ಟೆಂಬರ್ 2021, 11:26 IST
Last Updated 15 ಸೆಪ್ಟೆಂಬರ್ 2021, 11:26 IST
ರಣವೀರ್ ಸಿಂಗ್ ಹಾಗೂ ದೀಪಿಕಾ ದಂಪತಿ
ರಣವೀರ್ ಸಿಂಗ್ ಹಾಗೂ ದೀಪಿಕಾ ದಂಪತಿ   

ಮುಂಬೈ: ಬಾಲಿವುಡ್ ತಾರಾ ದಂಪತಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರು ದಕ್ಷಿಣ ಮುಂಬೈನ ಆಲಿಬಾಗ್‌ ಬೀಚ್ ಬಳಿ ₹22 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿರುವುದಾಗಿ ವರದಿಯೊಂದು ತಿಳಿಸಿದೆ.

2.25 ಎಕರೆ ವಿಶಾಲ ಪ್ರದೇಶದಲ್ಲಿ ಸುಮಾರು 18,000 ಚದರ ಅಡಿ ವ್ಯಾಪ್ತಿಯಲ್ಲಿ ಈ ಬಂಗಲೆಯನ್ನು ನಿರ್ಮಿಸಲಾಗಿದ್ದು, ಇದು ಎವರ್ ಸ್ಟೋನ್ ಗ್ರುಪ್ ಮಾಲೀಕ ರಾಜೇಶ್ ಜಗ್ಗಿ ಅವರ ಒಡೆತನದಲ್ಲಿತ್ತು ಎನ್ನಲಾಗಿದೆ.

ಐದು ಬೆಡ್‌ರೂಮ್‌ಗಳ ವಿಶಾಲ ಬಂಗಲೆಯಾಗಿರುವ ಈ ಮನೆ ಕಿಹಿಮ್ ಬೀಚ್‌ಗೆ ಕೇವಲ 10 ನಿಮಿಷದ ಪ್ರಯಾಣದ ಅಂತರದಲ್ಲಿದೆ. ಈ ಪ್ರದೇಶದಲ್ಲಿ ಶಾರುಖ್‌ ಖಾನ್‌ ಸೇರಿದಂತೆ ಅನೇಕ ಕೋಟ್ಯಾದೀಶರು ಮನೆ ಮಾಡಿದ್ದಾರೆ.

ADVERTISEMENT

ಬಂಗಲೆ ಖರೀದಿ ಬಗ್ಗೆ ರಣವೀರ್ ಕಚೇರಿ ಯಾವುದೇ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ. ಆದರೆ, ರಣವೀರ್ ಹಾಗೂ ದೀಪಿಕಾ ಒಡೆತನದ ಸಂಸ್ಥೆಗಳೇ ಇದನ್ನು ಖರೀದಿಸಿವೆ ಎಂಬುದು ಬಹಿರಂಗವಾಗಿದೆ. ಸೆ.13 ರಂದು ದೀಪಿಕಾ–ರಣವೀರ್ ಹೆಸರಿಗೆ ಬಂಗಲೆ ನೋಂದಣಿಯಾಗಿದ್ದು, ₹1.32 ಕೋಟಿ ಮುಂಗಡ ಪಾವತಿಸಲಾಗಿದೆಎಂದು ಮನಿ ಕಂಟ್ರೋಲ್.ಕಾಮ್ ತಿಳಿಸಿದೆ.

ಸದ್ಯ ರಣವೀರ್–ದೀಪಿಕಾ ಮುಂಬೈನ ಸ್ವಾಂಕಿ ಅಪಾರ್ಟ್‌ಮೆಂಟ್‌ನಲ್ಲಿ 2018 ರಿಂದ ನೆಲೆಸಿದ್ದಾರೆ.

1983 ರಲ್ಲಿ ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದಿರುವ ಹಾಗೂ ಕಪಿಲ್ ದೇವ್ ಕುರಿತು ಕಥೆ ಹೊಂದಿರುವ ಮುಂಬರುವ ‘83‘ ಸಿನಿಮಾದಲ್ಲಿ ರಣವೀರ್ ಹಾಗೂ ದೀಪಿಕಾ ಒಟ್ಟಾಗಿ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.