ADVERTISEMENT

ಮಾಲ್ಡೀವ್ಸ್ ಬೀಚ್‌ನಲ್ಲಿ ಸನ್ ಕಿಸ್ಡ್ ಫೋಟೊ ಪೋಸ್ಟ್ ಮಾಡಿದ ಸಾರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2021, 12:27 IST
Last Updated 12 ಸೆಪ್ಟೆಂಬರ್ 2021, 12:27 IST
ಸಾರಾ ಅಲಿ ಖಾನ್ - ಇನ್‌ಸ್ಟಾಗ್ರಾಂ ಪೋಸ್ಟ್
ಸಾರಾ ಅಲಿ ಖಾನ್ - ಇನ್‌ಸ್ಟಾಗ್ರಾಂ ಪೋಸ್ಟ್    

ಬೆಂಗಳೂರು: ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್, ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ.

ಜತೆಗೆ ಹೊಸ ತಾಣಗಳಿಗೆ ಭೇಟಿ ನೀಡುವುದು ಮತ್ತು ಪ್ರವಾಸದ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವುದು ಕೂಡ ಸಾರಾಗೆ ಅಚ್ಚುಮೆಚ್ಚು.

ಈ ಬಾರಿ ಸಾರಾ ಅಲಿ ಖಾನ್, ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಸಹಜವೆಂಬಂತೆ ಬಿಕಿನಿ ಧರಿಸಿ, ಬೀಚ್ ಬಳಿ ನಿಂತಿರುವ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

ಸಾರಾ ಅಲಿ ಖಾನ್ ಅವರ ಚಿತ್ರ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಜತೆಗೆ ಫೋಟೊಗೆ ಆಕರ್ಷಕ ಅಡಿಬರಹ ನೀಡುವ ಅಭ್ಯಾಸವೂ ಸಾರಾ ಅವರಿಗಿದೆ.

ಪ್ರವಾಸಕ್ಕೆ ತೆರಳುವ ಸಂದರ್ಭದಲ್ಲಿ ಗೆಳತಿಯರನ್ನು ಕೂಡ ಕರೆದುಕೊಂಡು ಹೋಗುವುದು ಸಾರಾ ಅವರಿಗೆ ಮೆಚ್ಚಿನ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.