ADVERTISEMENT

ಜಾರಿ ಬಿದ್ದರೂ ಯಾಕೀ ನಗು: 'ಕಂಬ್ಳಿಹುಳ' ಸಿನಿಮಾದ ಹಾಡು ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಆಗಸ್ಟ್ 2022, 13:58 IST
Last Updated 18 ಆಗಸ್ಟ್ 2022, 13:58 IST
 'ಕಂಬ್ಳಿಹುಳ' ಚಿತ್ರದ ಪೋಸ್ಟರ್‌
'ಕಂಬ್ಳಿಹುಳ' ಚಿತ್ರದ ಪೋಸ್ಟರ್‌   

ಚಂದನವನದಲ್ಲಿ 'ಕಂಬ್ಳಿಹುಳ' ಸಿನಿಮಾದ ಮೊದಲ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆಯಾಗಿದೆ. ಹಾಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

'ಜಾರಿ ಬಿದ್ದರೂ ಯಾಕೀ ನಗು, ಚಾಚು ತಪ್ಪದೇ ದಿನವೂ ಸಿಗು...' ಈ ಹಾಡನ್ನು ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಕೆಲವೇ ಗಂಟೆಗಳಲ್ಲಿ ಹಾಡು ಸಾವಿರಾರು ವೀಕ್ಷಣೆ ಕಂಡಿದೆ.ಗಾಯಕ ವಿಜಯ ಪ್ರಕಾಶ್, ಗಾಯಕಿ ಸಂಗೀತ ರವೀಂದ್ರನಾಥ್ ಅವರು ಸುಮಧುರವಾಗಿ ಹಾಡಿದ್ದಾರೆ. ಶಿವಪ್ರಸಾದ್ ಅವರ ಸಂಗೀತ ಇಂಪಾಗಿದೆ.

ಹಾಡಿನ ಮಧ್ಯೆ ಬರುವ ಸಂಭಾಷಣೆಗಳು ಹಾಗೂ ಕೋರಸ್ ಹಾಡನ್ನು ಮತ್ತಷ್ಟು ಸುಂದರಗೊಳಿಸಿದೆ. ಹಾಡಿನಲ್ಲಿ ಹಾಗೂ ಸಿನಿಮಾದಲ್ಲಿ ಮಲೆನಾಡಿನ ಚಿತ್ರಣವನ್ನು ಕಟ್ಟಿಕೊಡಲಾಗಿದೆ ಎಂದು ಚಿತ್ರತಂಡ ಹೇಳಿದೆ.

ADVERTISEMENT

ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಸವೀನ್, ಪುನೀತ್, ಗುರು, ವಿಜಯ್ ಬಂಡವಾಳ ಹೂಡಿದ್ದಾರೆ. ಸತೀಶ್ ರಾಜೇಂದ್ರ ಛಾಯಾಗ್ರಾಹಕರಾಗಿದ್ದು, ಜಿತೇಂದ್ರ ನಾಯಕ, ರಾಘವೇಂದ್ರ ಟಿಕೆ ಸಂಕಲನಕಾರರಾಗಿ ಶ್ರಮಿಸಿದ್ದಾರೆ.

ಸಿನಿಮಾ ತಂಡದಲ್ಲಿ ರೋಹಿತ್ ಕುಮಾರ್, ದೀಪಕ್ ರೈ ಪಣಜೆ, ಸಂಧ್ಯಾ ಅರಕೆರೆ ಸೇರಿದಂತೆ ಹಲವು ನಟರು ಅಭಿನಯಿಸಿದ್ದಾರೆ. ಈ ಹಿಂದೆಜೋಡಿ ಕುದುರೆ, ಗೋಣಿ ಚೀಲ ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದ ನವನ್ ಶ್ರೀನಿವಾಸ್'ಕಂಬ್ಳಿಹುಳ' ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.