ADVERTISEMENT

ರಕ್ಷಿತ್‌, ರಚಿತಾ, ರಶ್ಮಿಕಾ ಸಹಿತ 14 ಮಂದಿಗೆ ಪ್ರತಿಷ್ಠಿತ ‘ಸೈಮಾ’ ಪ್ರಶಸ್ತಿ

2019ನೇ ಸಾಲಿನ ಚಿತ್ರಗಳಿಗೆ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 9:55 IST
Last Updated 19 ಸೆಪ್ಟೆಂಬರ್ 2021, 9:55 IST
ರಕ್ಷಿತ್‌ ಶೆಟ್ಟಿ ಹಾಗೂ ನಟಿ ರಶ್ಮಿಕಾ (ರಿಕ್‌ ಪಾರ್ಟಿ ಚಿತ್ರದ ಚಿತ್ರೀಕರಣದ ಸಂದರ್ಭದ ಸಂಗ್ರಹ ಚಿತ್ರ)
ರಕ್ಷಿತ್‌ ಶೆಟ್ಟಿ ಹಾಗೂ ನಟಿ ರಶ್ಮಿಕಾ (ರಿಕ್‌ ಪಾರ್ಟಿ ಚಿತ್ರದ ಚಿತ್ರೀಕರಣದ ಸಂದರ್ಭದ ಸಂಗ್ರಹ ಚಿತ್ರ)   

ಬೆಂಗಳೂರು: ಪ್ರತಿಷ್ಠಿತ ದಕ್ಷಿಣ ಭಾರತ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ(ಸೈಮಾ ಪ್ರಶಸ್ತಿ) ಪ್ರದಾನ ಶನಿವಾರ ಹೈದರಾಬಾದ್‌ನಲ್ಲಿ ನಡೆದಿದ್ದು, ಈ ಪೈಕಿ ಕನ್ನಡದ 14 ಪ್ರತಿಭೆಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. 2019ನೇ ಸಾಲಿನಲ್ಲಿ ಬಿಡುಗಡೆಯಾದ ಚಿತ್ರಗಳಿಗೆ ಈ ಪ್ರಶಸ್ತಿ ಪುರಸ್ಕಾರ ನೀಡಲಾಗಿದೆ. 2020ರಲ್ಲಿ ನಡೆಯಬೇಕಿದ್ದ ಈ ಸಮಾರಂಭ ಕೋವಿಡ್‌ ಕಾರಣದಿಂದ ಮುಂದೂಡಲ್ಪಟ್ಟಿತ್ತು.

ರಶ್ಮಿಕಾ ಮಂದಣ್ಣ, ಮಹೇಶ್ ಬಾಬು, ರಕ್ಷಿತ್ ಶೆಟ್ಟಿ, ನಾನಿ, ರಚಿತಾ ರಾಮ್, ಶ್ರುತಿ ಹಾಸನ್, ಶಾನ್ವಿ ಶ್ರೀವತ್ಸ ಮುಂತಾದ ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾರಂಭ ಕಳೆಗಟ್ಟಿಸಿದ್ದರು. ಮಲಯಾಳಂ, ತಮಿಳು ಚಿತ್ರರಂಗದ ಅನೇಕರು ಇದೇ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿ ಪುರಸ್ಕೃತರ ವಿವರ

ADVERTISEMENT

ಭಾಷೆ; ಕಲಾವಿದ; ಚಿತ್ರ; ವಿಭಾಗ


ಕನ್ನಡ; ರಕ್ಷಿತ್‌ ಶೆಟ್ಟಿ;ಅವನೇ ಶ್ರೀಮನ್ನಾರಾಯಣ; ಅತ್ಯುತ್ತಮ ನಟ

ರಚಿತಾ ರಾಮ್; ಆಯುಷ್ಮಾನ್‌ ಭವ; ಅತ್ಯುತ್ತಮ ನಟಿ

ರಶ್ಮಿಕಾ ಮಂದಣ್ಣ; ಯಜಮಾನ; ಅತ್ಯುತ್ತಮ ನಟಿ ವಿಮರ್ಶಕರ ಪ್ರಶಸ್ತಿ

ಅಭಿಷೇಕ್‌ ಅಂಬರೀಷ್‌; ಅಮರ್‌; ಅತ್ಯುತ್ತಮ ನವ ನಟ

ಕಾರುಣ್ಯಾ ರಾಮ್‌; ಮನೆ ಮಾರಾಟಕ್ಕಿದೆ; ಅತ್ಯುತ್ತಮ ಪೋಷಕ ನಟಿ

ಮಯೂರ ರಾಘವೇಂದ್ರ; ಕನ್ನಡ್‌ ಗೊತ್ತಿಲ್ಲ; ಅತ್ಯುತ್ತಮ ಚೊಚ್ಚಲ ನಿರ್ದೇಶನ

ಸಾಧು ಕೋಕಿಲ; ಯಜಮಾನ; ಅತ್ಯುತ್ತಮ ಹಾಸ್ಯ ನಟ

ವಿ. ಹರಿಕೃಷ್ಣ, ಪೋನ್‌ ಕುಮಾರನ್‌; ಯಜಮಾನ; ಅತ್ಯುತ್ತಮ ನಿರ್ದೇಶನ

ವಿ. ಹರಿಕೃಷ್ಣ; ಯಜಮಾನ; ಅತ್ಯುತ್ತಮ ಸಂಗೀತ ನಿರ್ದೇಶನ

ಸಾಯಿ ಕುಮಾರ್‌; ಭರಾಟೆ; ಅತ್ಯುತ್ತಮ ಖಳನಟ

ಇಮ್ರಾನ್‌ ಸರ್ದಾರಿಯಾ; ಅವನೇ ಶ್ರೀಮನ್ನಾರಾಯಣ; ಅತ್ಯುತ್ತಮ ನೃತ್ಯ ನಿರ್ದೇಶನ

ಅನನ್ಯಾ ಭಟ್‌; ಗೀತಾ– ಹಾಡು: ಕೇಳದೇ ಕೇಳದೇ;ಅತ್ಯುತ್ತಮ ಹಿನ್ನೆಲೆ ಗಾಯಕಿ

ಪವನ್‌ ಒಡೆಯರ್‌; ನಟಸಾರ್ವಭೌಮ; ಅತ್ಯುತ್ತಮ ಗೀತ ಸಾಹಿತ್ಯ

ದರ್ಶನ್‌; ಯಜಮಾನ; ಅತ್ಯುತ್ತಮ ನಟ

ತೆಲುಗು; ಮಹೇಶ್‌ ಬಾಬು; ಮಹರ್ಷಿ; ಅತ್ಯುತ್ತಮ ನಟ

ವಂಶಿ; ಮಹರ್ಷಿ; ಅತ್ಯುತ್ತಮ ನಿರ್ದೇಶಕ

ನಾನಿ; ಜೆರ್ಸಿ ಆ‍್ಯಂಡ್‌ ಗ್ಯಾಂಗ್‌ ಲೀಡರ್‌; ಅತ್ಯುತ್ತಮ ಮನೋರಂಜನಾತ್ಮಕ ಚಿತ್ರ

ರಶ್ಮಿಕಾ ಮಂದಣ್ಣ; ಡಿಯರ್‌ ಕಾಮ್ರೇಡ್‌; ಅತ್ಯುತ್ತಮ ನಟಿ ವಿಮರ್ಶಕರ ಪ್ರಶಸ್ತಿ

ಅಲ್ಲರಿ ನರೇಶ್‌; ಮಹರ್ಷಿ; ಅತ್ಯುತ್ತಮ ಪೋಷಕ ನಟ

ಚಿನ್ಮಯಿ ಶ್ರೀಪಾದ್‌; ಅತ್ಯುತ್ತಮ ಹಿನ್ನೆಲೆ ಗಾಯಕಿ (ಹಾಡು– ಪ್ರಿಯತಮ ಪ್ರಿಯತಮ)

ಸ್ವರೂಪ್‌ ಆರ್‌ಎಸ್‌ಜೆ; ಏಜೆಂಟ್‌ ಸಾಯಿ ಶ್ರೀನಿವಾಸ ಆತ್ರೇಯ; ಅತ್ಯುತ್ತಮ ಚೊಚ್ಚಲ ನಿರ್ದೇಶನ

ಶ್ರೀ ಸಿಂಹ; ಮಾಟು ವಡಲರ; ಅತ್ಯುತ್ತಮ ಹೊಸ ನಟ

ಶಿವಾತ್ಮಿಕಾ ರಾಜಶೆಖರ್‌; ದೊರಸಾನಿ; ಅತ್ಯುತ್ತಮ ಹೊಸ ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.