ADVERTISEMENT

ಹಸಿರು ಆಭರಣ ವರ್ಷದ ಟ್ರೆಂಡ್

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 19:45 IST
Last Updated 11 ಫೆಬ್ರುವರಿ 2019, 19:45 IST
1
1   

ತೊಟ್ಟಿರುವ ಉಡುಗೆಗೆ ಆಭರಣಗಳನ್ನು ಮ್ಯಾಚ್‌ ಮಾಡುವ ಕಾಲ ಮುಗಿಯಿತು. ಈಗ ಮಿಕ್ಸ್‌ಡ್‌ ಮ್ಯಾಚ್‌ ಫ್ಯಾಷನ್‌. ಅದರಲ್ಲಿ ಹಸಿರು ಹ್ಯಾಂಡ್‌ ಮೇಡ್‌ ಆಭರಣಗಳು ಈ ವರ್ಷದ ಟ್ರೆಂಡ್‌ ಎಂದು ಹೇಳುತ್ತಿದೆ ಫ್ಯಾಷನ್‌ ಜಗತ್ತು. ಅದರಲ್ಲೂ ಆಕರ್ಷಕ ವಿನ್ಯಾಸಗಳ ನೆಕ್ಲೆಸ್‌ಗಳು ಮಹಿಳೆಯರನ್ನು ಮೋಡಿ ಮಾಡುತ್ತಿವೆ.

ದುಬಾರಿ ಬೆಲೆಯ ಚಿನ್ನ, ವಜ್ರ, ಹರಳು, ಪ್ಲಾಟಿನಂ ಆಭರಣಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಈ ಆಭರಣಗಳು ಮನಸೆಳೆಯುತ್ತವೆ. ಇವುಗಳನ್ನು ತೊಟ್ಟು ಓಡಾಡುವಾಗ ಭಯವೂ ಇರುವುದಿಲ್ಲ. ಹೆಚ್ಚು ಕಾಳಜಿವಹಿಸಿ ಸಂರಕ್ಷಣೆ ಮಾಡುವ ಅಗತ್ಯವೂ ಇಲ್ಲ. ಕೃತಕ ಆಭರಣಗಳ ಅನುಕೂಲವಿದು.

ಹಸಿರು ಆಭರಣಗಳು ಧರಿಸುವವರಿಗೂ, ನೋಡುವವರಿಗೂ ಹಸಿರು ಅಭಿಮಾನ ಮೂಡಿಸುವಂತಿದೆ. ಬಿಳಿ, ಕಡುಗೆಂಪು, ನೀಲಿ ಬಣ್ಣದ ಉಡುಗೆಗಳ ಜೊತೆಗೆ ತೆಳು ಬಣ್ಣದ ಉಡುಗೆಗಳಿಗೂ ಒಪ್ಪುತ್ತದೆ. ಜೀನ್ಸ್‌– ಟೀಶರ್ಟ್ ಮೇಲೂ ತೊಟ್ಟರೆ ಒಟ್ಟಂದ ಹೆಚ್ಚಿಸುವುದರಲ್ಲಿ, ಆಧುನಿಕ ಲುಕ್‌ ನೀಡುವುದರಲ್ಲಿ ಸಂಶಯವಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.