ADVERTISEMENT

ವಿಡಿಯೊ | ದೇವಿ ವಿಗ್ರಹಕ್ಕೆ ಕೈಮುಗಿದು ಪ್ರಾರ್ಥಿಸಿ, ಕಿರೀಟ ಕದ್ದ ಕಳ್ಳ

ಹೈದರಾಬಾದ್‌

ಏಜೆನ್ಸೀಸ್
Published 22 ನವೆಂಬರ್ 2019, 12:22 IST
Last Updated 22 ನವೆಂಬರ್ 2019, 12:22 IST
ವಿಗ್ರಹಕ್ಕೆ ನಮಿಸುತ್ತಿರುವ ಕಳ್ಳ – ಸಿಸಿಟಿವಿ ವಿಡಿಯೊ ಸ್ಟ್ರೀನ್‌ ಶಾಟ್‌
ವಿಗ್ರಹಕ್ಕೆ ನಮಿಸುತ್ತಿರುವ ಕಳ್ಳ – ಸಿಸಿಟಿವಿ ವಿಡಿಯೊ ಸ್ಟ್ರೀನ್‌ ಶಾಟ್‌   

ಹೈದರಾಬಾದ್‌:ದೇವಾಲಯಕ್ಕೆ ಬಂದು ಭಕ್ತಿಯಿಂದ ಕೈಮುಗಿದು ದೇವಿ ವಿಗ್ರಹದ ಮುಂದೆ ನಿಂತು ನಮಸ್ಕರಿಸಿ, ಪ್ರದಕ್ಷಿಣೆ ಹಾಕಿ ದೇವಿಯ ಕಿರೀಟವನ್ನೇ ಕದ್ದೊಯ್ದಿರುವ ಕಳ್ಳನಿಗಾಗಿ ಹೈದರಾಬಾದ್‌ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ನಗರದ ವಾಣಿಜ್ಯ ಚಟುವಟಿಕೆ ಕೇಂದ್ರ ಅಬಿಡ್ಸ್‌ ಭಾಗದಲ್ಲಿರುವ ದುರ್ಗಾ ಭವಾನಿ ದೇವಾಲಯದಲ್ಲಿ ಕಳ್ಳತನ ನಡೆದಿದೆ. ಪ್ರಾರ್ಥನೆ ಸಲ್ಲಿಸಿ ದೇವರ ವಿಗ್ರಹದ ಕಿರೀಟ ಕದ್ದಿರುವ ದೃಶ್ಯಸಿಸಿಟಿವಿ ಕ್ಯಾಮೆರಾ ಸೆರೆಯಾಗಿದೆ. ಅದರ ವಿಡಿಯೊ ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಕಳ್ಳತನದ ಘಟನೆಸುದ್ದಿಯಾಗಿದೆ.

ದೇವಿಯ ಗರ್ಭಗುಡಿಪ್ರವೇಶಿಸಿರುವ ವ್ಯಕ್ತಿ ಕೆಲ ಸಮಯ ಭಕ್ತಿ ಪ್ರದರ್ಶಿಸುತ್ತಾನೆ, ಅತ್ತಿತ್ತ ಕಣ್ಣಾಡಿಸಿ ಯಾರೊಬ್ಬರೂಸುಳಿಯದ್ದನ್ನು ಗಮನಿಸಿ ಕಿರೀಟವನ್ನು ಬಿಡಿಸಿಕೊಳ್ಳಲು ಮುಂದಾಗಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಕಟ್ಟಿದ್ದದಾರ ಅಥವಾ ತಂತಿಯಂತಹ ವಸ್ತುಗಳಿಂದ ಕಿರೀಟ ಬಿಡಿಸಿಕೊಂಡು ಬಟ್ಟೆಯೊಳಗೆ ತುರುಕಿಕೊಂಡು ಸದ್ದಿಲ್ಲದೆ ಮಂದಿರದಿಂದ ಹೊರಡುತ್ತಾನೆ.

ADVERTISEMENT

ಹೊರಗೆ ಹೋದ ನಂತರ ಬೈಕ್‌ನಲ್ಲಿ ಸಾಗಿರುವುದು ಸಹ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳತನದ ಮುನ್ನ ಹಾಗೂ ಕಳ್ಳತನದ ಬಳಿಕವೂ ದೇವರ ವಿಗ್ರಹಕ್ಕೆ ನಮಿಸಿರುವುದನ್ನು ಕಾಣಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ವೀಕ್ಷಿಸಿರುವವರು, 'ಯಾವುದೇ ಕೆಲಸಕ್ಕೂ ಮುನ್ನ ದೇವರಿಗೆ ಪ್ರಾರ್ಥಿಸಿಆರಂಭಿಸಬೇಕು...ಇದು ಒಳ್ಳೆಯ ಮಾಹಿತಿ', 'ಸ್ಥಳದಲ್ಲಿಯೇ ಆತ ಕ್ಷಮೆಯಾಚಿಸಿದ್ದಾನೆ..',..ಹೀಗೆ ಹಲವು ವ್ಯಂಗ್ಯದ ಕಮೆಂಟ್ ಮಾಡಿದ್ದಾರೆ.

ದೇವಿ ಪೂಜೆಗೆ ಬಂದ ಅರ್ಚಕ ಕಿರೀಟ ಕಾಣದೆ ಗಾಬರಿಯಾಗಿದ್ದಾರೆ. ಶುಚಿಗೊಳಿಸಲು ಅದನ್ನು ತೆಗೆದಿರುವ ಬಗ್ಗೆ ವ್ಯವಸ್ಥಾಪಕರಲ್ಲಿ ವಿಚಾರಿಸಿದ್ದಾರೆ. ಅಲ್ಲಿಂದ ಮುಂದೆ, ಸಿಸಿಟಿವಿ ದೃಶ್ಯಾವಳಿಗಳಿಂದ ಕಳ್ಳತನ ನಡೆದಿರುವುದು ಪತ್ತೆಯಾಗಿದೆ. ಅಬಿಡ್ಸ್‌ ಪೊಲೀಸರು ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.