ADVERTISEMENT

ಕೋವಿಡ್‌ ಜಾಗೃತಿಗೆ ತೆಲುಗು ಸಿನಿಮಾ‌ ಪೋಸ್ಟರ್‌; ಅಸ್ಸಾಂ ಪೊಲೀಸರ ವಿನೂತನ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 14:44 IST
Last Updated 10 ಜುಲೈ 2020, 14:44 IST
ರಾಧೆಶ್ಯಾಮ್‌ ಚಿತ್ರದ ಪೋಸ್ಟರ್‌
ರಾಧೆಶ್ಯಾಮ್‌ ಚಿತ್ರದ ಪೋಸ್ಟರ್‌   

ಪ್ರಭಾಸ್‌ ನಟನೆಯ ಹೊಸ ಚಿತ್ರ‘ರಾಧೆಶ್ಯಾಮ್’‌ ಫಸ್ಟ್‌ಲುಕ್‌ ಬಿಡುಗಡೆ ಮಾಡಿದ ಕ್ಷಣದಿಂದ ನಟ ಪ್ರಭಾಸ್‌ ಹಾಗೂ ನಟಿ ಪೂಜಾ ಹೆಗ್ಡೆ ಭಾರಿ ಸುದ್ದಿಯಲ್ಲಿದ್ದಾರೆ. ಈಗ ಅಸ್ಸಾಂ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ, ಚಿತ್ರದ ಹೊಸ ಪೋಸ್ಟರ್‌ ಮೂಲಕ ಕೋವಿಡ್‌– 19 ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಅಸ್ಸಾಂನ ನಾಗಾಂವ್ ನಗರದ ಪೊಲೀಸರು ‘ರಾಧೆಶ್ಯಾಮ್’‌ ಚಿತ್ರದ ಫಸ್ಟ್‌ಲುಕ್‌ನಲ್ಲಿನ ಪ್ರಭಾಸ್‌ ಹಾಗೂ ಪೂಜಾ ಹೆಗ್ಡೆ ಫೋಟೋಶಾಪ್‌ ಮಾಡಿ ಮಾಸ್ಕ್‌ ತೊಡಿಸಿದ್ದಾರೆ. ಅದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ನಿಮ್ಮ ಪ್ರೀತಿಪಾತ್ರರು ಎಲ್ಲಿಗೆ ಹೋಗಬೇಕಾದರೂ ಮಾಸ್ಕ್‌ ತೊಟ್ಟುಕೊಳ್ಳುವಂತೆ ಹೇಳಿ. ನಾವು ಪ್ರಭಾಸ್‌ಗೆ ಕರೆ ಮಾಡಲು ಪ್ರಯತ್ನಿಸಿದೆವು. ಆದರೆ ಸಾಧ್ಯವಾಗಲಿಲ್ಲ. ಈಗ ಈ ಫೋಟೊಶಾಪ್‌ ಚಿತ್ರದ ಮೂಲಕ ಅವರಿಗೆ ಸಂದೇಶ ಕಳುಹಿಸುತ್ತಿದ್ದೇವೆ’ ಎಂದು ಟ್ವೀಟ್‌ ಮಾಡಿದ್ದಾರೆ. ಅದನ್ನು ನಟಿ ಪೂಜಾ ಹೆಗ್ಡೆ, ನಿರ್ದೇಶಕ ರಾಧಾಕೃಷ್ಣಕುಮಾರ್‌, ಅಸ್ಸಾಂ ಪೊಲೀಸ್‌, ಪ್ರಭಾಸ್‌ 20 ಎಂದು ಟ್ಯಾಗ್‌ ಮಾಡಿದ್ದಾರೆ.

ADVERTISEMENT

ಪೋಸ್ಟರ್‌ನಲ್ಲಿ ‘ಅವರ್‌ ಪರ್‌ಫೆಕ್ಟ್‌ ರಾಧೆಶ್ಯಾಮ್ ಆಫ್‌‌ 2020’ ಎಂದು ಬರೆದು, ಪೂಜಾ ಹೆಗ್ಡೆ ಹಾಗೂ ಪ್ರಭಾಸ್ ಇಬ್ಬರು‌ ಮಾಸ್ಕ್‌ ಧರಿಸಿರುವ ಮತ್ತೊಂದು ಫೋಟೊ ಅಟ್ಯಾಚ್‌ ಮಾಡಿದ್ದಾರೆ. ನಾಗಾಂವ್‌ ಪೊಲೀಸರ ಟ್ವೀಟ್‌ ಅನ್ನು ಮೂರು ಸಾವಿರಕ್ಕೂ ಹೆಚ್ಚು ಜನ ರಿಟ್ವೀಟ್‌ ಮಾಡಿದ್ದಾರೆ.

ರಾಧಾ ಕೃಷ್ಣ ಕುಮಾರ್‌ ನಿರ್ದೇಶನದ ಈ ಚಿತ್ರವುಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. 2021ರಲ್ಲಿ ಈ ಚಿತ್ರ ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.