ADVERTISEMENT

'ಜಸ್ಟ್ ಎ ಫ್ರೆಂಡ್' ಖ್ಯಾತಿಯ ಅಮೆರಿಕದ ರ್‍ಯಾಪರ್‌ ಬಿಜ್‌ ಮಾರ್ಕಿ ನಿಧನ

ಏಜೆನ್ಸೀಸ್
Published 17 ಜುಲೈ 2021, 6:08 IST
Last Updated 17 ಜುಲೈ 2021, 6:08 IST
ಬಿಜ್‌ ಮಾರ್ಕಿ
ಬಿಜ್‌ ಮಾರ್ಕಿ   

ನ್ಯೂಯಾರ್ಕ್: ಅಮೆರಿಕದ ಖ್ಯಾತರ್‍ಯಾಪರ್‌, ಡಿಜೆ ಹಾಗೂ ಆಲ್ಬಂ ಹಾಡುಗಳು ನಿರ್ಮಾಪಕ ಬಿಜ್‌ ಮಾರ್ಕಿ ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು.

ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. ಶುಕ್ರವಾರ ರಾತ್ರಿ ನ್ಯೂಯಾರ್ಕ್‌ನಲ್ಲಿ ನಿಧನರಾದರು ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

90ರ ದಶಕದಲ್ಲಿ'ಜಸ್ಟ್ ಎ ಫ್ರೆಂಡ್'ರ್‍ಯಾಪ್‌ ಹಾಡಿನ ಮೂಲಕ ಬಿಜ್‌ ಖ್ಯಾತಿಗಳಿಸಿದ್ದರು. ನೂರಾರು ಹಿಪ್‌ ಹಾಪ್‌ ಹಾಗೂರ್‍ಯಾಪ್‌ ಹಾಡುಗಳಿಗೆ ಬಿಜ್‌ ದನಿಯಾಗಿದ್ದರು. ಹಲವು ವಿಡಿಯೊ ಸಾಂಗ್‌ಗಳನ್ನು ನಿರ್ಮಾಣ ಮಾಡಿದ್ದರು.

ADVERTISEMENT

ಬಿಜ್‌ ಅವರ ಮೂಲ ಹೆಸರು ಮಾರ್ಸೆಲ್ ಹಾಲ್. ಅವರು ಸಂಗೀತ ಕ್ಷೇತ್ರಕ್ಕೆ ಬಂದ ಮೇಲೆ ಬಿಜ್‌ ಮಾರ್ಕಿ ಎಂದು ಹೆಸರುಬದಲಿಸಿಕೊಂಡಿದ್ದರು.

‘ಪಿಕಿನ್', ‘ಬೂಗರ್ಸ್‌‘ ಮತ್ತು ‘ಚೈನೀಸ್ ಫುಡ್‘ ಅವರ ಜನಪ್ರಿಯರ್‍ಯಾಪ್‌ ಹಾಡುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.