ADVERTISEMENT

ದೇವಾಲಯದಲ್ಲಿ ಚುಂಬನ ದೃಶ್ಯ: ನೆಟ್‌ಫ್ಲಿಕ್ಸ್‌ ವಿರುದ್ಧ ಟ್ವೀಟಿಗರ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2020, 11:14 IST
Last Updated 22 ನವೆಂಬರ್ 2020, 11:14 IST
ಎ ಸೂಟನಲ್‌ ಬಾಯ್‌ ವೆಬ್‌ ಸರಣಿಯ ದೃಶ್ಯ
ಎ ಸೂಟನಲ್‌ ಬಾಯ್‌ ವೆಬ್‌ ಸರಣಿಯ ದೃಶ್ಯ   

ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿರುವ 'ಎ ಸೂಟಬಲ್ ಬಾಯ್' ವೆಬ್‌ ಸರಣಿ ವಿರುದ್ಧ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂ ಯುವತಿಗೆ ಮುಸ್ಲಿಂ ಯುವಕನೊಬ್ಬ ದೇವಸ್ಥಾನವೊಂದರಲ್ಲಿ ಚುಂಬಿಸುವ ದೃಶ್ಯವನ್ನು ಈ ವೆಬ್‌ ಸರಣಿಯಲ್ಲಿ ತೋರಿಸಲಾಗಿದೆ ಎಂಬುದು ಟ್ವೀಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ #BoycottNetflix ಎಂಬ ಹ್ಯಾಶ್‌ಟ್ಯಾಗ್‌ ಟ್ರೆಂಡ್‌ ಆಗಿದೆ.

'ಎ ಸೂಟಬಲ್ ಬಾಯ್‌' ವಿಚಾರವಾಗಿ ಟ್ವೀಟ್‌ ಮಾಡಿರುವ ಬಿಜೆಪಿ ವಕ್ತಾರ ಗೌರವ್ ಗೋಯೆಲ್, 'ಯಾವುದೇ ಒಟಿಟಿ ವೇದಿಕೆಯಲ್ಲಿ ಹಿಂದೂ ದೇವತೆಗಳನ್ನು ಉದ್ದೇಶಪೂರ್ವಕವಾಗಿ ಅವಮಾನ ಮಾಡಿದರೆ ಸ್ಥಳೀಯ ಪೊಲೀಸ್ ಅಥವಾ ನ್ಯಾಯಾಲಯಕ್ಕೆ ದೂರು ನೀಡಿ' ಎಂದು ಜನರನ್ನು ಒತ್ತಾಯಿಸಿದ್ದಾರೆ.

ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ನೆಟ್‌ಫ್ಲಿಕ್ಸ್‌ ವೆಬ್‌ ಸರಣಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೆಬ್‌ ಸರಣಿಯಲ್ಲಿರುವ ದೃಶ್ಯಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತವೆ. ಇದು ಕಾನೂನಿನ ಹಸ್ತಕ್ಷೇಪಕ್ಕೆ ಅರ್ಹವಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಕೆಲ ಟ್ವೀಟಿಗರು ನೆಟ್‌ಫ್ಲಿಕ್ಸ್‌ ಪರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲೈಂಗಿಕತೆಗೆ ಸಂಬಂಧಿಸಿದ ಭಾವ-ಭಂಗಿಗಳನ್ನು ಹೊಂದಿರುವ ವಾಸ್ತುಶಿಲ್ಪಗಳು ಒಂದಷ್ಟು ದೇವಾಲಯಗಳಲ್ಲಿವೆ ಎಂದು ವಾದಿಸಿದ್ದಾರೆ. ತಮ್ಮ ಟ್ವೀಟ್‌ಗಳಲ್ಲಿ ವಾಸ್ತುಶಿಲ್ಪಗಳ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.

1947ರಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳು ಅನುಭವಿಸಿದ ತಲ್ಲಣಗಳ ಸುತ್ತ 'ಎ ಸೂಟಬಲ್ ಬಾಯ್‌' ಕಥೆಯನ್ನು ಹೆಣೆಯಲಾಗಿದೆ. ಇದು ವಿಕ್ರಮ್‌ ಸೇಠ್‌ ಅವರ ಜನಪ್ರಿಯ ಕಾದಂಬರಿಯಾಗಿದ್ದು, ಮೀರಾ ನಾಯರ್‌ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಇಶಾನ್ ಸೂಟಬಲ್‌ ಬಾಯ್‌ ಆಗಿ ಕಾಣಿಸಿಕೊಂಡಿದ್ದಾರೆ. ಜತೆಗೆ ಟಬು,ರಸಿಕಾ ದುಗ್ಗಲ್‌, ತಾನ್ಯಾ, ರಾಮ್‌ ಕಪೂರ್ ಮತ್ತಿತರರು ನಟಿಸಿದ್ದಾರೆ.

'ಎ ಸೂಟಬಲ್‌ ಬಾಯ್‌' ಟ್ರೈಲರ್‌ ಇಲ್ಲಿದೆ...

'ಎ ಸುಟೇಬಲ್‌ ಬಾಯ್‌' ವಿರೋಧಿಸಿದ ಮತ್ತಷ್ಟು ಟ್ವೀಟ್‌ಗಳು ಇಲ್ಲಿವೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.