ADVERTISEMENT

‘ಕನ್ಯಾದಾನ' ಕುರಿತ ಜಾಹೀರಾತು: ಆಲಿಯಾ ಭಟ್‌ ವಿರುದ್ಧ ಕಿಡಿಕಾರಿದ ಕಂಗನಾ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 13:12 IST
Last Updated 21 ಸೆಪ್ಟೆಂಬರ್ 2021, 13:12 IST
ಕಂಗನಾ, ಆಲಿಯಾ ಭಟ್‌
ಕಂಗನಾ, ಆಲಿಯಾ ಭಟ್‌   

ಬೆಂಗಳೂರು: ಬಾಲಿವುಡ್​ನ ಖ್ಯಾತ ನಟಿ ಆಲಿಯಾ ಭಟ್ ಕಾಣಿಸಿಕೊಂಡಿರುವ ಜಾಹೀರಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದೆ.

‘ಕನ್ಯಾದಾನ’ದ ವಿಷಯವನ್ನು ಆಧಾರವಾಗಿಟ್ಟುಕೊಂಡು ಜಾಹೀರಾತನ್ನು ನಿರ್ಮಿಸಲಾಗಿದ್ದು, ವಧುವನ್ನು ದಾನ ಮಾಡಲು ವಸ್ತುವೇ? ಎಂಬ ಪ್ರಶ್ನೆಯನ್ನು ಜಾಹೀರಾತು ಎತ್ತುತ್ತದೆ.

ಜಾಹೀರಾತಿನ ಕುರಿತು ಸಾಮಾಜಿಕ ಜಾಲತಾಣ ’ಕೂ’ ವೇದಿಕೆಯಲ್ಲಿ ಬರೆದುಕೊಂಡಿರುವ ಕಂಗನಾ, 'ನಮ್ಮ ಮೌಲ್ಯಗಳನ್ನು ಅಣಕಿಸಬೇಡಿ' ಎಂದು ಆಲಿಯಾ ಅವರನ್ನು ನೇರವಾಗಿಯೇ ಉಲ್ಲೇಖಿಸಿದ್ದಾರೆ. ಜೊತೆಗೆ ಕನ್ಯಾದಾನದ ಕುರಿತು ವಿವರಿಸಿದ್ದಾರೆ.

ADVERTISEMENT

'ಎಲ್ಲಾ ಬ್ರಾಂಡ್‌ಗಳಿಗೆ ವಿನಮ್ರ ವಿನಂತಿ ... ನಿಮ್ಮ ವಸ್ತುಗಳನ್ನು ಮಾರಾಟ ಮಾಡಲು ಧರ್ಮವನ್ನು ಬಳಸುವುದನ್ನು ನಿಲ್ಲಿಸಿ, ಅಲ್ಪಸಂಖ್ಯಾತರು ಮತ್ತು ಹಿಂದೂ ದ್ವೇಷಿಗಳನ್ನು ಮೆಚ್ಚಿಸಲು ಪ್ರಯತ್ನಿಸುವ ಹಿಂದೂಫೋಬಿಕ್ ಜಾಹೀರಾತುಗಳನ್ನು ನಿಲ್ಲಿಸಿ ಎಂದಿದ್ದಾರೆ.

'ಮೊದಲು ಹಿಂದೂ ಧರ್ಮವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ. ‘ದಾನ’ಪರಿಕಲ್ಪನೆಯನ್ನು ತಿಳಿದಿಲ್ಲದ ಮೂರ್ಖರು ನೀವು ಅದನ್ನು ಏನೆಂದು ಖಂಡಿಸುತ್ತೀರಾ?.

'ಮೊದಲು ತ್ಯಾಗದ ತತ್ವಗಳನ್ನು ಹಾಗು ಮಹಿಳೆ ಮತ್ತು ಭೂಮಿಯನ್ನು ಅಸ್ತಿತ್ವದ ಮೂಲವೆಂದು ಏಕೆ ಪರಿಗಣಿಸಲಾಗಿದೆ ಎಂಬುದನ್ನು ತಿಳಿಯಿರಿ' ಎಂದು ಕಂಗನಾ ‘ಕೂ’ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.