ADVERTISEMENT

ಪಾತಾಳ್ ಲೋಕ್ ವಿರುದ್ಧ ಗೂರ್ಖಾ ಗುಟುರು

​ಪ್ರಜಾವಾಣಿ ವಾರ್ತೆ
Published 22 ಮೇ 2020, 6:31 IST
Last Updated 22 ಮೇ 2020, 6:31 IST
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ   

ಅನುಷ್ಕಾ ಶರ್ಮಾ ನಿರ್ಮಾಣದ ‘ಪಾತಾಳ್ ಲೋಕ್’ ವೆಬ್ ಸರಣಿಯಲ್ಲಿ ಇರುವ ಸಂಭಾಷಣೆಯೊಂದನ್ನು ತೆಗೆಯಬೇಕು ಎಂದು ಗೂರ್ಖಾ ಸಮುದಾಯವನ್ನು ಪ್ರತಿನಿಧಿಸುವ ಸಂಘಟನೆಯೊಂದು ಆಗ್ರಹಿಸಿದೆ. ಭಾರತೀಯ ಗೂರ್ಖಾ ಯುವ ಪರಿಸಂಘ ಎಂಬುದು ಈ ಸಂಘಟನೆಯ ಹೆಸರು.

ಈ ಸರಣಿಯಲ್ಲಿ ಒಂದು ಸಂಭಾಷಣೆಯಲ್ಲಿ ನಿಂದನಾತ್ಮಕ ಮಾತುಗಳು ಇವೆ. ಪಾತ್ರವೊಂದನ್ನು ಉದ್ದೇಶಿಸಿ ಆಡಿರುವ ಆ ಮಾತುಗಳು, ಗೂರ್ಖಾ ಸಮುದಾಯವನ್ನು ನೇರವಾಗಿ ನಿಂದಿಸುವಂತೆ ಇವೆ ಎಂದು ಈ ಸಂಘಟನೆ ಆರೋಪಿಸಿದೆ.

‘ಈ ಸಂಭಾಷಣೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಹಾಗೆಯೇ, ಇದನ್ನು ಮ್ಯೂಟ್‌ ಮಾಡಬೇಕು ಎಂದು ಆಗ್ರಹಿಸುತ್ತಿದ್ದೇವೆ’ ಎಂದು ಸಂಘಟನೆ ಹೇಳಿದೆ. ಈ ಸಂಭಾಷಣೆಯ ವಿಚಾರವಾಗಿ ಅನುಷ್ಕಾ ಅವರಿಗೆ ವಕೀಲರೊಬ್ಬರು ನೋಟಿಸ್‌ ಜಾರಿಗೊಳಿಸಿದ್ದಾರೆ ಎಂಬ ವರದಿಗಳು ಬಾಲಿವುಡ್ ಅಂಗಳದಿಂದ ಬಂದಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.