ADVERTISEMENT

ಕೊನೆಗೂ ಪುಟಾಣಿ ಯೋಗ ಸಂಗಾತಿ ಹುಡುಕಿದ ಪೂಜಾ ಬಾತ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜುಲೈ 2021, 8:13 IST
Last Updated 13 ಜುಲೈ 2021, 8:13 IST
ನಟಿ ಪೂಜಾ ಬಾತ್ರಾ ಇನ್‌ಸ್ಟಾಗ್ರಾಂ ಪೋಸ್ಟ್
ನಟಿ ಪೂಜಾ ಬಾತ್ರಾ ಇನ್‌ಸ್ಟಾಗ್ರಾಂ ಪೋಸ್ಟ್    

ಬೆಂಗಳೂರು: ನಟಿ ಪೂಜಾ ಬಾತ್ರಾ ಫಿಟ್ನೆಸ್ ಮತ್ತು ಯೋಗದ ಕುರಿತು ಆಗಾಗ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಈ ಬಾರಿ ಪೂಜಾ ಬಾತ್ರ, ಯೋಗ ಮಾಡಲು ಪುಟಾಣಿ ಸಂಗಾತಿಯನ್ನು ಹುಡುಕಿದ್ದಾರೆ. ಅದು ಬೇರಾರೂ ಅಲ್ಲ, ಅವರ ಸೋದರಳಿಯ..

ಪೂಜಾ ಅವರ ಪತಿ ನವಾಬ್ ಶಾ, ಈ ಚಿತ್ರಗಳನ್ನು ಸೆರೆಹಿಡಿದಿರುವುದಾಗಿ ನಟಿ ಹೇಳಿದ್ದು, ಪ್ರತಿ ದಿನ ಯೋಗ ಮಾಡುವ ಸಂದರ್ಭದಲ್ಲಿ ಸೋದರಳಿಯನೂ ಜತೆಗಿರುತ್ತಾನೆ, ಅವನೂ ಯೋಗ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.

ADVERTISEMENT

ಯೋಗ ಜೀವನದ ಕುರಿತು ಪೂಜಾ ಬಾತ್ರಾ ಹಲವು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೆ, ಜನರು ಯೋಗ ಮಾಡುವುದರಿಂದ ಉಂಟಾಗುವ ಪ್ರಯೋಜನಗಳ ಕುರಿತು ಕೂಡ ಗಮನ ಸೆಳೆಯುತ್ತಿರುತ್ತಾರೆ.

ಮಿಸ್ ಇಂಡಿಯಾ ವಿಜೇತ ನಟಿ ಪೂಜಾ, ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಬಾಲಿವುಡ್ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.