ADVERTISEMENT

Puri Musings: ನಟಿ ಚಾರ್ಮಿ ಕೌರ್ ಮದುವೆಯಾಗದಿರುವುದಕ್ಕೆ ಕಾರಣ ಇದು!

ನಟಿಯರು ಮದುವೆಯಾಗುವುದಕ್ಕೆ ಇಷ್ಟ ಪಡುವುದಿಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜೂನ್ 2021, 9:13 IST
Last Updated 19 ಜೂನ್ 2021, 9:13 IST
ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಅವರೊಂದಿಗೆ ನಟಿ ಚಾರ್ಮಿ, ಚಿತ್ರ ಕೃಪೆ–ಇನ್ಸ್ಟಾಗ್ರಾಮ್
ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಅವರೊಂದಿಗೆ ನಟಿ ಚಾರ್ಮಿ, ಚಿತ್ರ ಕೃಪೆ–ಇನ್ಸ್ಟಾಗ್ರಾಮ್   

ಬೆಂಗಳೂರು: ತೆಲುಗಿನ ಖ್ಯಾತ ಸಿನಿಮಾ ನಿರ್ದೇಶಕ ಪುರಿ ಜಗನ್ನಾಥ್ ಅವರು ಇತ್ತೀಚಿಗೆ ಸಾಕಷ್ಟು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಹೊಸ ಪ್ರಯತ್ನವನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ.

ಪುರಿ ಜಗನ್ನಾಥ್ ಅವರು ತಮ್ಮ ಅಧಿಕೃತ ಯೂಟ್ಯೂಬ್ ತಾಣದಲ್ಲಿ Puri Musings ಎಂಬ ಆಡಿಯೊ ಸರಣಿಗಳನ್ನು ಆರಂಭಿಸಿದ್ದು, ಇದರಲ್ಲಿ ಅವರು ತಮ್ಮದೇಯಾದ ಶೈಲಿಯಲ್ಲಿ ಜೀವನದ ಬಗ್ಗೆ ಫಿಲಾಸಫಿಯನ್ನು ಹೇಳುತ್ತಿದ್ದಾರೆ.

ಹೀಗೆ ಕಳೆದ ವಾರPuri Musings ನಲ್ಲಿ ಬಂದ ಸರಣಿಯಲ್ಲಿ ಅವರು ಮದುವೆಯ ಬಗ್ಗೆ ಮಾತನಾಡಿದ್ದಾರೆ. ಆಡಿಯೊ ಕ್ಲಿಪ್‌ನಲ್ಲಿ, ಪುರಿ ಜಗನ್ನಾಥ್, ‘ಮದುವೆಯಾಗಬೇಡಿ, ಏಕೆಂದರೆ ಒಂಟಿಯಿದ್ದವರು ಮದುವೆಯ ನಂತರವೂ ಒಂಟಿಯಾಗಬಹುದು. ಮೂಲತಃ ಪುರುಷರು ಮತ್ತು ಮಹಿಳೆಯರನ್ನು ಮದುವೆಯಾಗಲು ವಿನ್ಯಾಸಗೊಳಿಸಿಲ್ಲ. ಮದುವೆಯೇ ಬೇರೆ, ಜೀವನವೇ ಬೇರೆ. ಅದಕ್ಕಾಗಿಯೇ ವಿಚ್ಚೇಧನವೇ ಇಂದು ಹೆಚ್ಚು ಸಾಮಾನ್ಯವಾಗಿದೆ‘ ಎಂದಿದ್ದಾರೆ.

ADVERTISEMENT

ಜೀವನವನ್ನು ಅನುಭವಿಸುವ ಬಗ್ಗೆ ಅವರು ತಮ್ಮ ಉಪದೇಶಗಳನ್ನು ಹೇಳಿದ್ದಾರೆ.ಅಲ್ಲದೇ ನಟಿಯರು ಮದುವೆಯಾಗಲು ಇಷ್ಟಪಡುವುದಿಲ್ಲ ಎಂದಿದ್ದಾರೆ. ಹೀಗಾಗಿಯೇ, ನೆಟ್ಟಿಗರು ಪುರಿ ಅವರ ಮಾತುಗಳನ್ನು ನಟಿ ಚಾರ್ಮಿ ಕೌರ್ ಅವರಿಗೆ ಲಿಂಕ್ ಮಾಡಿದ್ದಾರೆ.

ವಯಸ್ಸು 34 ಆದರೂ, ಪುರಿ ಅವರ ಉಪದೇಶಗಳಿಂದ ಚಾರ್ಮಿ ಇದುವರೆಗೆ ಮದುವೆಯಾಗದೇ ಇರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಾರ್ಮಿ ಇತ್ತೀಚೆಗೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದು, ಪುರಿ ಜಗನ್ನಾಥ್ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ ಸದ್ಯ ಅವರು ವಿಜಯ್ ದೇವೇರಕೊಂಡ ಮತ್ತು ಅನನ್ಯಾ ಪಾಂಡೆ ನಟಿಸಿರುವ ‘ಲಿಗರ್’ ಸಿನಿಮಾ ನಿರ್ಮಾಣ ನೋಡಿಕೊಳ್ಳುತ್ತಿದ್ದಾರೆ. ಪುರಿ ಅವರ ಮಗ ಆಕಾಶ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ರೊಮ್ಯಾಂಟಿಕ್’ ಚಿತ್ರಕ್ಕೂ ಅವರು ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.