ADVERTISEMENT

ರಂಗದ ಮೇಲೆ ‘ಜಂಬದ ಕೋಳಿ’...

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 19:45 IST
Last Updated 12 ಜನವರಿ 2020, 19:45 IST
‘ಜಂಬದ ಕೋಳಿ’ ನಾಟಕ ಪ್ರದರ್ಶನ ನೀಡಿದ ಮಕ್ಕಳು
‘ಜಂಬದ ಕೋಳಿ’ ನಾಟಕ ಪ್ರದರ್ಶನ ನೀಡಿದ ಮಕ್ಕಳು   

ಈಚೆಗೆ ಸಂಚಾರಿ ಥಿಯೇಟರ್ ತಂಡ ‘ಜಂಬದ ಕೋಳಿ’ ಹಾಗೂ ‘ಕೋಟು ಗುಮ್ಮ’ ಎಂಬ ಎರಡು ಮಕ್ಕಳ ನಾಟಕವನ್ನು ಪ್ರದರ್ಶಶಿತ್ತು.
ಬಿ. ವಿ. ಕಾರಂತ ಹಾಗೂ ಪ್ರೇಮಾ ಕಾರಂತರ ದಂಪತಿ ನೆನಪಿನಲ್ಲಿ ಮಕ್ಕಳಿಗಾಗಿ ರಂಗಭೂಮಿ ಕಾರ್ಯಾಗಾರವನ್ನು ನಡೆಸುತ್ತಾ ಬಂದಿದೆ. 2004 ರಲ್ಲಿ ಪ್ರಾರಂಭವಾದ ಸಂಚಾರಿ, ಇಲ್ಲಿಯವರೆಗೆ ಸುಮಾರು 22 ನಾಟಕಗಳನ್ನು ನಿರ್ಮಿಸಿದೆ.

ಈ ಬಾರಿ ರಂಗಶಿಬಿರದಕೊನೆಯಲ್ಲಿ ಮಕ್ಕಳು ಹಾಡು, ಕುಣಿತ, ಸೇರಿ ‘ಜಂಬದ ಕೋಳಿ’ ಎಂಬ ನಾಟಕವನ್ನು ಪ್ರದರ್ಶಿಸಿದವು.

ಗೀತಪ್ರಿಯ ಅವರ ‘ಜಂಬದ ಕೋಳಿ’ ಹಾಡನ್ನೇ ರಂಗರೂಪವಾಗಿ ಅಳವಡಿಸಲಾಗಿತ್ತು. ಸತ್ಯಶ್ರೀ ಕೆ. ಎಸ್. ನಿರ್ದೇಶಿಸಿದ ಈ ನಾಟಕಕ್ಕೆ, ಗಜಾನನ ಟಿ. ನಾಯ್ಕ ಸಂಗೀತ ಸಂಯೋಜನೆ ಮಾಡಿದ್ದರು.

ADVERTISEMENT

ತನ್ನ ಕೋಳಿಗಳು ಕೂಗುವುದರಿಂದಲೇ ಬೆಳಗಾಗುತ್ತದೆ ಎಂಬ ಅಜ್ಜಿಯ ಭ್ರಮೆಯ ಕುರಿತಾದ ನಾಟಕ ಇದು. ಎರಡು ಪುಟ್ಟ ಮಕ್ಕಳ ಕೋಳಿಯ ವೇಷಭೂಷಣ ಹಾಗೂ ಪ್ರಸಾಧನ

ವೈದೇಹಿ ಅವರು ಬರೆದಿರುವ ನಾಟಕ ‘ಕೋಟು ಗುಮ್ಮ’ ನಾಟಕವನ್ನು ನಿರ್ದೇಶಿಸಿದ್ದು ಚಂದ್ರಕೀರ್ತಿ ಬಿ. ಸಂಗೀತ ನೀಡಿದ್ದು ಗಜಾನನ ಟಿ. ನಾಯ್ಕ.

‘ಕೋಟು ಗುಮ್ಮ’ ನಾಟಕ ಮಕ್ಕಳ ಭಯದ ಕುರಿತು ಮಾತನಾಡುತ್ತದೆ. ಚಿಕ್ಕಂದಿನಲ್ಲಿ ಎಲ್ಲರಿಗೂ ಯಾವುದಾದರೊಂದರಿಂದ ಭಯವೇ. ಮಕ್ಕಳನ್ನು ಹದ್ದುಬಸ್ತಿನಲ್ಲಿಡಲು ಆ ಭಯವನ್ನು ಬಿತ್ತುವವರು ಪಾಲಕರೇ. ಆದರೆ ಚಿಕ್ಕಂದಿನ ಭಯ ಮುಂದೆ ದೊಡ್ಡವರಾದ ಮೇಲೂ ಉಳಿದುಬಿಡುವುದು ದುರಂತ. ಶಾಲೆಯಲ್ಲಿ ಮಾಸ್ತರರ ಕೋಟೊಂದರಲ್ಲಿ ಬೆಕ್ಕು ಸೇರಿಕೊಂಡು ಮಕ್ಕಳನ್ನು ಹೇಗೆ ಭಯಭೀತಗೊಳಿಸುತ್ತದೆ ಹಾಗೂ ಮಕ್ಕಳು ಆ ಭಯದಿಂದ ಹೇಗೆ ಮುಕ್ತರಾಗುತ್ತಾರೆ ಎಂಬುದು ನಾಟಕದ ಕಥಾವಸ್ತು.

ಭೂತವನ್ನು ಓಡಿಸಲು ಮಕ್ಕಳು ಮಾಡುವ ಯೋಜನೆ, ಮಾಸ್ತರು ಇಲ್ಲದಾಗ ತರಗತಿಯಲ್ಲಿ ಮಾಡುವ ಚೇಷ್ಟೆ, ತರಗತಿಯ ಬಾಗಿಲು ತೆರೆದಿದ್ದರೂ ಕಿಟಕಿಯಿಂದ ಹಾರಿ ಒಳಬರುವ ಮಕ್ಕಳ ತುಂಟತನ, ನಾಟಕದಲ್ಲಿ ಮಕ್ಕಳು ಹಾಡುವ ‘ತರಕಾರಿ ಪಾರ್ಟಿ ಸಾಂಗ್’, ಎಲ್ಲವೂ ಸೇರಿ ಒಂದು ಅತ್ಯುತ್ತಮ ನಾಟಕ ಪ್ರದರ್ಶಿಸಲ್ಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.