ADVERTISEMENT

ಚಿತ್ರೀಕರಣ ವೇಳೆ ನಟ ಗೋವಿಂದೇಗೌಡಗೆ ಅಪಘಾತ; ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 5:36 IST
Last Updated 28 ಜುಲೈ 2021, 5:36 IST
ನಟ ಗೋವಿಂದೇಗೌಡ
ನಟ ಗೋವಿಂದೇಗೌಡ   

ಬೆಂಗಳೂರು: ಕಿರುತೆರೆ ನಟ ಹಾಗೂಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಖ್ಯಾತಿಯಾಗಿದ್ದ ನಟ ಗೋವಿಂದೇಗೌಡಗೆ ಅಪಘಾತವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಸಂಜೆ ಚಿತ್ರೀಕರಣ ಸಮಯದಲ್ಲಿ ಗೋವಿಂದೇಗೌಡಗೆ ಅಪಘಾತವಾಗಿದೆ. ಕೂಡಲೇ ಅವರನ್ನು ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಟ ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.

ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕಗೋವಿಂದೇಗೌಡ ಖ್ಯಾತಿಯಾಗಿದ್ದರು. ಹಲವು ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.