ADVERTISEMENT

ನಿರ್ದೇಶಕನಿಂದ ಎಫ್‌ಬಿಗೆ ಅಶ್ಲೀಲ ಸಂದೇಶ; ದೂರು ದಾಖಲಿಸಿದ ನಟಿ

ಪಿಟಿಐ
Published 29 ಆಗಸ್ಟ್ 2021, 10:38 IST
Last Updated 29 ಆಗಸ್ಟ್ 2021, 10:38 IST
ಪಾಯಲ್ ಸರ್ಕಾರ್, ಚಿತ್ರ ಕೃಪೆ–ಟ್ವಿಟರ್
ಪಾಯಲ್ ಸರ್ಕಾರ್, ಚಿತ್ರ ಕೃಪೆ–ಟ್ವಿಟರ್   

ಕೋಲ್ಕತ್ತ: ‘ಸಿನಿಮಾ ನಿರ್ದೇಶಕರೊಬ್ಬರ ಹೆಸರಿನಲ್ಲಿ ನನ್ನ ಫೇಸ್‌ಬುಕ್‌ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ‘ ಎಂದು ಬಂಗಾಳಿ ನಟಿ ಪಾಯಲ್ ಸರ್ಕಾರ್ ಕೋಲ್ಕತ್ತಾ ಸೈಬರ್ ಪೊಲೀಸರಿಗೆ ಭಾನುವಾರ ದೂರು ನೀಡಿದ್ದಾರೆ.

‘ಬಂಗಾಳಿಯ ಚಿರಪರಿಚಿತ ನಿರ್ದೇಶಕರೊಬ್ಬರ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನನಗೆ ಗೆಳೆತನದ ಕೋರಿಕೆ ಬಂದಿತ್ತು. ಅದನ್ನು ಸ್ವೀಕರಿಸಿದಾಗ ಅವರು ನನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದ್ದರು. ಅವರು ಕಳಿಸಿದ ಸಂದೇಶಗಳು ಅಶ್ಲೀಲತನದ ಪರಮಾವಧಿಯಾಗಿತ್ತು. ಕೂಡಲೇ ಇವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿ ಎಂದು ದೂರು ನೀಡಿರುವೆ‘ ಎಂದು ಪಾಯಲ್ ಹೇಳಿದ್ದಾರೆ.

ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ‘ಇದೊಂದು ನಕಲಿ ಖಾತೆಯಾಗಿದ್ದು, ಅದು ಮೂಲ ಹೆಸರಿನವರಿಗೆ ಸಂಬಂಧಿಸಿಲ್ಲ‘ ಎಂದು ಹೇಳಿದ್ದಾರೆ. ಆ ನಿರ್ದೇಶಕರು ಕೂಡ ಇದರ ಬಗ್ಗೆ ಪ್ರತಿಕ್ರಿಯಿಸಿದ್ದು ‘ನಕಲಿ ಖಾತೆಯ ಮೂಲಕ ಇಷ್ಟೆಲ್ಲ ಆಗಿದೆ‘ ಎಂದು ಪ್ರತಿ ದೂರು ದಾಖಲಿಸಿದ್ದಾರೆ.

ಇನ್ನು ಪಾಯಲ್ ಸರ್ಕಾರ್ ಅವರು ಬಂಗಾಳಿ ಕಿರುತೆರೆಯ ಜನಪ್ರಿಯ ನಟಿಯಾಗಿದ್ದು, ಥಾಪುರ್ ಥಾಪುರ್, ಅಂದರ್ ಮಹಲ್, ಬೆನೆ ಬೋವು, ತುಮಿ ರಾಬೆ ನಿರೊಬಿ ಎಂಬ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.