ADVERTISEMENT

Bigg Boss 8: ಎಲಿಮಿನೇಶನ್‌ನಿಂದ ಪಾರಾಗಲು ‘ವಿಜಯದಂಡ’

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 6:30 IST
Last Updated 15 ಜುಲೈ 2021, 6:30 IST
ಕಲರ್ಸ್ ಕನ್ನಡ ವಿಡಿಯೊ ಸ್ಕ್ರೀನ್ ಶಾಟ್
ಕಲರ್ಸ್ ಕನ್ನಡ ವಿಡಿಯೊ ಸ್ಕ್ರೀನ್ ಶಾಟ್   

ಬೆಂಗಳೂರು: ಬಿಗ್ ಬಾಸ್ ಎರಡನೇ ಇನಿಂಗ್ಸ್‌ನ 4ನೇ ವಾರ ನಾಮಿನೇಟ್ ಆದ ಮನೆಯ ಸದಸ್ಯರಿಗೆ ಎಲಿಮಿನೇಶನ್ ತಪ್ಪಿಸಿಕೊಳ್ಳಲು ಬಿಗ್ ಬಾಸ್, ಹೊಸ ಆಯ್ಕೆ ನೀಡಿದ್ದಾರೆ. ಹಾಗಾಗಿ, ಎಲಿಮಿನೇಶನ್‌ನಿಂದ ಪಾರಾಗಲು ಎಲ್ಲ ಸ್ಪರ್ಧಿಗಳು ಕಷ್ಟಪಟ್ಟು ಟಾಸ್ಕ್ ಗೆಲ್ಲುವ ಪೈಪೋಟಿಗೆ ಬಿದ್ದಿದ್ದಾರೆ.

ಏನಿದು ಟ್ವಿಸ್ಟ್?: ಕ್ಯಾಪ್ಟನ್ ಅರವಿಂದ್ ಸೇರಿ ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿದೆ. ಒಂದು ತಂಡಕ್ಕೆ ಕೆ.ಪಿ. ಅರವಿಂದ್ ಮತ್ತು ಮತ್ತೊಂದು ತಂಡಕ್ಕೆ ಮಂಜು ಪಾವಗಡ ಅವರು ನಾಯಕರಾಗಿದ್ದಾರೆ. ತಲಾ 5 ಸದಸ್ಯರಿರುವ ತಂಡ ಆಗಾಗ್ಗೆ ಬಿಗ್ ಬಾಸ್ ಕೊಡುವ ಟಾಸ್ಕ್‌ಗಳನ್ನು ಗೆದ್ದು ವಿಜಯದಂಡ ಪಡೆಯಬೇಕು. ಅಂತಿಮವಾಗಿ, ಅತಿ ಹೆಚ್ಚು ದಂಡ ಪಡೆದ ತಂಡ ಎಲಿಮಿನೇಶನ್‌ನಿಂದ ಪಾರಾಗಲಿದೆ. ಸೋತ ತಂಡದ ಒಬ್ಬ ಸದಸ್ಯ ಈ ವಾರಾಂತ್ಯದಲ್ಲಿ ವೀಕ್ಷಕರ ಮತಗಳ ಆಧಾರದ ಮೇಲೆ ಎಲಿಮಿನೇಟ್ ಅಗುತ್ತಾರೆ.

ತಲಾ 4 ದಂಡ ಪಡೆದಿರುವ ತಂಡಗಳು: ಬುಧವಾರದ ಹೊತ್ತಿಗೆ ಮಂಜು ಪಾವಗಡ ನೇತೃತ್ವದ ‘ನಿಂಗೈತೆಇರು’ ತಂಡ ಮತ್ತು ಕೆ.ಪಿ ಅರವಿಂದ್ ಅವರ ‘ವಿಜಯಯಾತ್ರೆ’ ತಂಡ ತಲಾ 4 ದಂಡಗಳನ್ನು ಗೆದ್ದಿದ್ದು, ಸಮಬಲ ಸಾಧಿಸಿವೆ. ಹೀಗಾಗಿ, ಮನೆಯ ಟಾಸ್ಕ್‌ಗಳು ಮತ್ತಷ್ಟು ಕಾವು ಪಡೆದಿವೆ. ಈ ಹಿಂದೆ ಟಾಸ್ಕ್ ಗೆದ್ದಾಗ ನಾಯಕರಾಗುವ ಆಯ್ಕೆ ಕೊಡುತ್ತಿದ್ದ ಬಿಗ್ ಬಾಸ್ ಈ ಬಾರಿ ಎಲಿಮಿನೆಶನ್ನಿನಿಂದ ಸೇಫ್ ಆಗುವ ಅವಕಾಶ ನೀಡಿರುವುದು ಇದಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT