ADVERTISEMENT

ಕುಟಿಗದ ಗುಟುಕು...

ಜೀವಿ–ಸಂಕುಲ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 19:45 IST
Last Updated 26 ಮಾರ್ಚ್ 2020, 19:45 IST
ಕಂಚುಟಿಗ
ಕಂಚುಟಿಗ   

ಟುಂಕ್ ಟುಂಕ್ ಟುಂಕ್ ಟುಂಕ್ ಟುಂಕ್ ( ಕಂಚಿಗೆ ಸುತ್ತಿಗೆಯಲ್ಲಿ ಹೊಡೆದಂತೆ - A metallic sound) ಹೇಳುತ್ತಾ ಹೋಗಿ. ನಿಮಗೆ ಈ ಪಕ್ಷಿಯ ಚಿತ್ರ ತಲೆಗೆ ಬರದಿದ್ದರೂ ಕೂಗಂತೂ ನೆನಪಿಗೆ ಬರುವ ಸಾಧ್ಯತೆ ಹೆಚ್ಚು.

ಮೊನ್ನೆ ಭಾನುವಾರ ಊರಿನಲ್ಲಿದ್ದಾಗ ಹೀಗಾಯಿತು, ಪಕ್ಕದ ಅಜ್ಜಿಯ ಮನೆಯ ಮೇಲೆ ಹತ್ತಿ ಸಪೋಟ ಎಷ್ಟು ಹಣ್ಣಾಗಿವೆ ಎಂದು ಪರೀಕ್ಷಿಸಲು ಹೋದಾಗ ಹಸಿರು ಮೈಯಿನ ಕೆಂಪು ನೆಕ್ಲೇಸ್ ಹಾಕಿರುವ ಪಕ್ಷಿಯೊಂದು ನುಗ್ಗೆಮರದ ಮೇಲೆ ಕೂತು ಸುತ್ತಲೂ ನೋಡುತ್ತಿತ್ತು. ಇದನ್ನ ಕಳೆದ ಬಾರಿ ಕಂಡದ್ದು ನೆನಪಾಗಿ ಕಂಚುಕುಟಿಗ ಎಂದು ಗುರುತಿಸಿ ಗಮನಿಸಿದವನಿಗೆ ಇದೇನೋ ಹೊಂಚು ಹಾಕಿ ಕುಳಿತಿರುವಂತೆ ಕಂಡಿತು.

ನಂತರ ಆ ಕೊಂಬೆಯಿಂದ ಈ ಕೊಂಬೆಗೆ ಹಾರುತ್ತಾ ಎಲ್ಲವನ್ನೂ ಪರೀಕ್ಷಿಸುತ್ತಾ ಸುತ್ತಮುತ್ತಲೂ ಯಾರೂ ಇರದನ್ನು ಖಚಿತ ಪಡಿಸಿಕೊಂಡು ಟೊಂಗೆಯ ಹಿಂದೆ ಹಾರಿದಾಗ ಸಪೋಟ ಹಣ್ಣನ್ನು ಅಲ್ಲಿಯೇ ಬಿಟ್ಟು ಕ್ಯಾಮೆರಾ ಹಿಡಿದು ಹೊರಟವನಿಗೆ ಸಿಕ್ಕಿದ್ದು ಈ ಅಮ್ಮ ಮಗುವಿನ ದೃಶ್ಯ.

ADVERTISEMENT

ಮಗುವಿಗೆ ಉಣಿಸಿ ಒಮ್ಮೆ ಗೂಡಿನೊಳಗೆ ಹೋಗಿ ನಿಮಿಷದ ನಂತರ ಹೊರಗೊಮ್ಮೆ ತಲೆ ಇಣುಕಿ ಮತ್ತೆ ಸುತ್ತಲೂ ಪರೀಕ್ಷಿಸಿ ಹೊರ ಹಾರಿತು. ಹೀಗೆ ಮಾಡುವ ಮುಖ್ಯ ಕಾರಣ ಪರ ಭಕ್ಷಕರ ಕಣ್ಣಿಗೆ ತನ್ನ ಗೂಡು ಕಾಣಿಸದಂತೆ ಕಾಪಾಡಿಕೊಳ್ಳುವುದು.

ವಿಡಿಯೊ ನೋಡಲುhttps://photos.app.goo.gl/v3UjjRpAq1Skudkv6 ಲಿಂಕ್ ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.