ADVERTISEMENT

16 ವಲಯಗಳಲ್ಲಿ ಸಾವಿರಾರು ಪ್ರಾಣಿಗಳ ಮಾದರಿ ಸಂಗ್ರಹ

ಪಿಟಿಐ
Published 13 ಅಕ್ಟೋಬರ್ 2020, 10:36 IST
Last Updated 13 ಅಕ್ಟೋಬರ್ 2020, 10:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಕೋವಿಡ್‌ ನಿರ್ಬಂಧಗಳ ಮಧ್ಯೆಯೂ ದೇಶದ 16 ವಲಯಗಳಿಂದ ಸಾವಿರಾರು ಪ್ರಾಣಿಗಳ ಮಾದರಿಯನ್ನು‘ಜೂವಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ’ವಿಜ್ಞಾನಿಗಳು ಸಂಗ್ರಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದರು.

ಸಂಗ್ರಹಿಸಲಾದ ಪ್ರಾಣಿಗಳ ಮಾದರಿ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸಗಢ ಸೇರಿ 16 ಪ್ರದೇಶಗಳಿಂದ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ವಿವಿಧ‍ಪ್ರಭೇಧಗಳ ಮಾದರಿಗಳನ್ನು ಸಂಗ್ರಹಿಸಲು ಆರಂಭಿಸಿದ್ದೇವೆ. ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಮಾದರಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ ಎಂದುಝೆಡ್ಎಸ್‌ಐ ನಿರ್ದೇಶಕ ಕೈಲಾಶ್‌ ಚಂದ್ರ ಅವರು ಮಾಹಿತಿ ನೀಡಿದರು.

ಲಾಕ್‌ಡೌನ್ ವೇಳೆಯಲ್ಲಿ ಝೆಡ್ಎಸ್‌ಐ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರಲಿಲ್ಲ. 104 ವರ್ಷಗಳಲ್ಲಿ ಒಮ್ಮೆಯೂ ಪ್ರಾಣಿಗಳ ಮಾದರಿಯನ್ನು ಸಂಗ್ರಹಿಸದಂತ ಪರಿಸ್ಥಿತಿ ಬಂದಿಲ್ಲ. ಈ ವರ್ಷ ಲಾಕ್‌ಡೌನ್‌ ಮಧ್ಯೆಯೇ ಈ ಕಾರ್ಯ ನಡೆಸಿದೆವು ಎಂದು ಹೇಳಿದರು.

ADVERTISEMENT

ಝೆಡ್‌ಎಸ್‌ಐ1916 ರಿಂದ ವಿವಿಧ ಪ್ರಾಣಿಗಳು ಮತ್ತು ದೇಶದಲ್ಲಿ ಅವುಗಳ ಹಂಚಿಕೆ ಬಗೆಗಿನ ಮಾಹಿತಿಯನ್ನು ದಾಖಲೀಕರಣ ಮಾಡುತ್ತಿದ್ದೇವೆ. 2020 ರಲ್ಲಿ ಸಂಗ್ರಹಿಸಿದ ವಿವಿಧ ಪ್ರಾಣಿಗಳ ಮಾದರಿಗಳ ದಾಖಲೆಗಳನ್ನು ಮುಂದಿನ ವರ್ಷ ಪ್ರಕಟಿಸಲಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.