ADVERTISEMENT

ತಾಪಮಾನ ಏರಿಕೆಯು ಕೊರೊನಾ ವೈರಸ್‌ಅನ್ನು ನಿಗ್ರಹಿಸುವುದೇ?  

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 8:43 IST
Last Updated 25 ಏಪ್ರಿಲ್ 2020, 8:43 IST
   

ಜಗತ್ತಿನ ನಾಗರಿಕರ ಆರೋಗ್ಯ, ಆರ್ಥಿಕತೆಯನ್ನು ಎಲ್ಲ ರೀತಿಯಿಂದ ಭಾದಿಸುತ್ತಿರುವ ಕೊರೊನಾ ವೈರಸ್‌ ಸಂಕ್ರಾಮಿಕಗೊಳ್ಳುವುದನ್ನು ತಡೆಯಲು ಇಡೀ ಜಗತ್ತು ಉತ್ತರ ಗೋಳಾರ್ಧದಲ್ಲಿನ ಉಷ್ಣಾಂಶ ಏರಿಕೆಯ ನಿರೀಕ್ಷೆಯಲ್ಲಿದೆ.

ಅದಕ್ಕೂ ಮೊದಲು ಈ ಕಾಯಿಲೆಯ ಋತುಮಾನಕ್ಕೆ ಸಂಬಂಧಿಸಿದ ಅಂಶಗಳ ಬಗ್ಗೆ ಗಮನಹರಿಸಬೇಕು. ಅದನ್ನು ವಿವರಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

ಕೊರೊನಾ ವೈರಸ್‌ ದೀರ್ಘ ಕಾಲೀನವಾಗಿಲ್ಲದೇ ಇರುವುದು, ಆರಂಭಿಕ ಹಂತರದಲ್ಲಿರುವುದರಿಂದ ಅದರ ಬಗ್ಗೆ ಮಾಹಿತಿ ಕಲೆ ಹಾಕಲು ತಜ್ಞರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇದೇ ಮಾದರಿಯಲ್ಲಿ ಹರಡಿರುವ ಕಾಯಿಲೆಗಳ ಮಾಹಿತಿಯ ಆಧಾರದ ಅಧ್ಯಯನ ಮಾಡಬೇಕಿದೆ ಎಂದು ಬ್ರಿಟನ್‌ನ ಪೂರ್ವ ಏಂಜಲಿಯಾ ವಿಶ್ವ ವಿದ್ಯಾಲಯದ ಸೋಂಕಿನ ಕಾಯಿಲೆಗಳ ತಜ್ಞ ಪಾಲ್‌ ಹಂಟರ್‌ ಹೇಳಿದ್ದಾರೆ.

ADVERTISEMENT

ಸಾಮಾನ್ಯ ನೆಗಡಿ, ಕೆಮ್ಮು ಮತ್ತು ಜ್ವರದಂಥ ಸಮಸ್ಯೆಗಳು ನಿರ್ದಿಷ್ಟ ಋತುಮಾನಗಳಲ್ಲಿ ಹೆಚ್ಚು ಪ್ರಸರಣೆಗೊಳ್ಳುತ್ತವೆ ಎಂಬುದು ಸದ್ಯ ಈ ಕಾಯಿಲೆಯ ಕುರಿತು ಮುಂದಿನ ಬೆಳವಣಿಗೆಗಳನ್ನು ಅಧ್ಯಯನ ಮಾಡಲು ನೆರವಾಗಿವೆ.

ಹವಾಮಾನ ಸನ್ನಿವೇಶಗಳು ವೈರಸ್‌ಗಳ ಹರಡುವಿಕೆಯನ್ನು ಹೆಚ್ಚಿಸುತ್ತವೆ ಎಂಬುದು ಗೊತ್ತಿರುವ ವಿಚಾರ. ವಾತಾವರಣದಲ್ಲಿನ ತೇವಾಂಶ ಮತ್ತು ಚಳಿಗಾಲದಲ್ಲಿ ಜನರು ವರ್ತಿಸುವ ರೀತಿ ಎಲ್ಲವೂ ಸಾಂಕ್ರಾಮಿಕದ ಪಥದ ಮೇಲೆ ಪರಿಣಾಮ ಬೀರಬಹುದು.

‘ಈ ನಿರ್ದಿಷ್ಟ ವೈರಸ್‌ನ ಮೇಲೆ ಋತುಮಾನದ ಪರಿಣಾಮಗಳು ಇದೆಯೋ ಇಲ್ಲವೋ ಎಂಬುದು ನಮಗೆ ಈ ವರೆಗೆ ತಿಳಿದಿಲ್ಲ. ಆದರೆ ಇತರ ಇತರ ಕೊರೊನಾ ವೈರಸ್‌ಗಳ ಮೇಲೆ ಋತುಮಾನ, ಹವಾಮಾನದ ಪರಿಣಾಮಗಳಿವೆ ಎಂಬುದು ನಮಗೆ ತಿಳಿದಿದೆ’ ಎಂದು ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ತುರ್ತು ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಪ್ರಾಧ್ಯಾಪಕ, ಬಾಲ್ಟಿಮೋರ್‌ನ ಆರೋಗ್ಯ ಆಯುಕ್ತ ಲೀನಾ ವೆನ್ ಹೇಳಿದ್ದಾರೆ.

ಚಳಿಗಾಲದಲ್ಲಿ ಸೋಂಕು ಹರಡುವುದೇ?

‘ಚಳಿಗಾಲದಲ್ಲಿ ಕೆಮ್ಮು, ಶೀತ ಮತ್ತು ಜ್ವರ ಹರಡುತ್ತದೆ ಎಂಬುದಕ್ಕೆ ಕಾರಣಗಳಿವೆ. ಶೀತ ಗಾಳಿಯು ಮೂಗಿನ ಹೊಳ್ಳೆ ಮತ್ತು ವಾಯುಮಾರ್ಗಗಳಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ. ಇದು ನಮ್ಮನ್ನು ವೈರಾಣು ಸೋಂಕಿಗೆ ಹೆಚ್ಚಾಗಿ ದೂಡುತ್ತವೆ,’ ಎಂದು ಬ್ರಿಟನ್‌ನ ವಿಶ್ವವಿದ್ಯಾಲಯದ ಸೆಲ್ಯುಲಾರ್ ಮೈಕ್ರೋಬಯಾಲಜಿಯ ತಜ್ಞ ಸೈಮನ್ ಕ್ಲಾರ್ಕ್ ಹೇಳಿದ್ದಾರೆ.

ಬೇಸಿಗೆಯಲ್ಲಿ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಬರಬಹುದೇ?

‘ಉತ್ತರ ಗೋಳಾರ್ಧದದಲ್ಲಿ ಉಷ್ಣಾಂಶ ಏರಿಕೆಯು ಕೊರೊನಾ ವೈರಸ್‌ನ ಹರಡುವಿಕೆಯನ್ನು ಗಣನೀಯವಾಗಿ ಕುಸಿಯುವಂತೆ ಮಾಡುವ ಸಾಧ್ಯತೆಗಳಿವೆ’ ಎಂದು ಸೋಂಕು ರೋಗಗಳ ತಜ್ಞ ಹಂಟರ್ ಅಭಿಪ್ರಾಯಪಟ್ಟಿದ್ದಾರೆ.

‘ಬೇಸಿಗೆಯಲ್ಲಿ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಲಾಗುತ್ತಿರುವ ಕೊರೊನಾ ವೈರಸ್‌ ಮತ್ತೆ ಕಾಣಿಸಿಕೊಳ್ಳುತ್ತದೆಯೇ ಎಂಬುದು ಈಗಿರುವ ಪ್ರಶ್ನೆ. ಅದು ಮತ್ತೆ ಚಳಿಗಾಲದಲ್ಲಿ ಮರಳಿದರೆ ಅದರಿಂದ ನನಗೇನೂ ಆಶ್ಚರ್ಯವಿಲ್ಲ,’ ಎಂದೂ ಹಂಟರ್‌ ಹೇಳಿದ್ದಾರೆ.

‘ತಾಪಮಾನ ಹೆಚ್ಚಾದಾಗ ಮತ್ತು ವಿಶೇಷವಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಕೊರೊನಾ ವೈರಸ್ ಶಕ್ತಿಯನ್ನು ಕಳೆದುಕೊಳ್ಳುತ್ತದೆ,’ ಎಂದು ಅಮೆರಿಕ ಸರ್ಕಾರದ ಸಂಶೋಧಕರು ಹೇಳಿದ್ದಾರೆ ಎಂದು ಹೋಮ್‌ ಲ್ಯಾಂಡ್‌ ಸೆಕ್ಯುರಿಟಿಯ ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ದೇಶನಾಲಯದ ಕಾರ್ಯಕಾರಿ ಮುಖ್ಯಸ್ಥ ವಿಲಿಯಂ ಬ್ರಿಯಾನ್ ಹೇಳಿದ್ದಾರೆ.

‘ಈ ಹೊಸ ವೈರಸ್ ಹರಡುವ ಸಾಧ್ಯತೆಗಳು ಇವೆ. ಬಹುತೇಕರಲ್ಲಿ ರೋಗನಿರೋಧಕ ಶಕ್ತಿ ಇಲ್ಲದಿರುವುದೂ ಇದಕ್ಕೆ ಕಾರಣವಿರಬಹುದು,’ ಎಂದು ಮತ್ತೊಬ್ಬ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.