ADVERTISEMENT

ಸಂಖ್ಯೆ-ಸುದ್ದಿ: ಕೋವಿಡ್‌ ಲಸಿಕೆ; ಕೆಲವು ರಾಜ್ಯಗಳಲ್ಲಿ ಹೆಚ್ಚು ಪ್ರಗತಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 19:24 IST
Last Updated 21 ಸೆಪ್ಟೆಂಬರ್ 2021, 19:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದೇಶದ ಹಲವು ರಾಜ್ಯಗಳಲ್ಲಿ ಶೇ 50ಕ್ಕಿಂತಲೂ ಹೆಚ್ಚು ಜನರಿಗೆ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಹಾಕಲಾಗಿದೆ. ಲಸಿಕೆಯ ಮೊದಲ ಡೋಸ್‌ ಪಡೆದವರ ಪ್ರಮಾಣ ಸಣ್ಣ ರಾಜ್ಯಗಳಲ್ಲಿ ಹೆಚ್ಚು. ಅಂತೆಯೇ ದೊಡ್ಡ ರಾಜ್ಯಗಳಲ್ಲಿ ಕಡಿಮೆ ಇದೆ.

ತೀರಾ ದೊಡ್ಡದೂ ಅಲ್ಲದ, ಚಿಕ್ಕದೂ ಅಲ್ಲದ ರಾಜ್ಯಗಳಲ್ಲಿ ಲಸಿಕೆ ಹಾಕಿಸಿಕೊಂಡವರ ಪ್ರಮಾಣ ಹೆಚ್ಚು ಇದೆ. ದೇಶದ ಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಗೋವಾದಲ್ಲಿ ಹೆಚ್ಚಿನ ಪ್ರಮಾಣದ ಜನರಿಗೆ ಲಸಿಕೆ ನೀಡಲಾಗಿದೆ. ಆದರೆ ಹೆಚ್ಚು ಜನಸಂಖ್ಯೆ ಹೊಂದಿರುವ ಕೇರಳದಲ್ಲಿ ಹೆಚ್ಚಿನ ಪ್ರಮಾಣದ ಜನರಿಗೆ ಲಸಿಕೆ ಹಾಕಲಾಗಿದೆ.

* ಹಲವು ರಾಜ್ಯಗಳು ಒಟ್ಟು ಜನಸಂಖ್ಯೆಯಲ್ಲಿ ಶೇ 50ರಷ್ಟು ಜನರಿಗೆ ಲಸಿಕೆಯ ಮೊದಲ ಡೋಸ್‌ ಹಾಕಿಸಿವೆ. ಕೆಲವು ರಾಜ್ಯಗಳಲ್ಲಿ ಈ ಪ್ರಮಾಣ ಶೇ 40-50ರ ನಡುವೆ ಇದೆ

ADVERTISEMENT

* ಆದರೆ ಎರಡನೇ ಡೋಸ್‌ ಹಾಕಿಸಿಕೊಂಡವರ ಸಂಖ್ಯೆ ತೀರಾ ಕಡಿಮೆ ಇದೆ. ಹಲವು ರಾಜ್ಯಗಳಲ್ಲಿ ಶೇ 20ಕ್ಕಿಂತಲೂ ಕಡಿಮೆ ಜನರಿಗಷ್ಟೇ ಎರಡನೇ ಡೋಸ್‌ ನೀಡಲಾಗಿದೆ

* ಕೆಲವು ರಾಜ್ಯಗಳಲ್ಲಿ ಎರಡನೇ ಡೋಸ್‌ ಪಡೆದವರ ಪ್ರಮಾಣ ಶೇ 15ಕ್ಕಿಂತಲೂ ಕಡಿಮೆ ಇದೆ

* ಲಸಿಕೆ ಕಾರ್ಯಕ್ರಮ ಆರಂಭವಾಗಿ ಒಂಬತ್ತು ತಿಂಗಳು ಆಗಲಿದೆ. ಈ ಅವಧಿಯಲ್ಲಿ ಬಹುತೇಕ ರಾಜ್ಯಗಳು ಶೇ 25ಕ್ಕಿಂತಲೂ ಕಡಿಮೆ ಜನರಿಗಷ್ಟೇ ಎರಡೂ ಡೋಸ್‌ಗಳನ್ನು ನೀಡಿವೆ

18 ವರ್ಷ ಮೇಲ್ಪಟ್ಟ 94 ಕೋಟಿ ಜನರಿಗೆ ಕೋವಿಡ್‌ ಲಸಿಕೆ ಹಾಕಲು ಸರ್ಕಾರ ಯೋಜನೆ ಹಾಕಿಕೊಂಡಿದೆ. 2021ರ ಡಿಸೆಂಬರ್ ಅಂತ್ಯದ ವೇಳೆಗೆ 94 ಕೋಟಿ ಜನರಿಗೆ ಎರಡೂ ಡೋಸ್‌ ಲಸಿಕೆ ಹಾಕಿಸಲು ಸರ್ಕಾರ ಗುರಿ ನಿಗದಿ ಮಾಡಿದೆ. ಆದರೆ ಈವರೆಗೆ 81 ಕೋಟಿ ಡೋಸ್‌ಗಳನ್ನು ನೀಡಲಾಗಿದ್ದು, ಇನ್ನೂ 107 ಕೋಟಿ ಡೋಸ್‌ ಲಸಿಕೆ ನೀಡಬೇಕಿದೆ. ಇದೇ ವೇಗದಲ್ಲಿ ಲಸಿಕೆ ನೀಡಿದರೆ, 94 ಕೋಟಿ ಜನರಿಗೂ ಎರಡು ಡೋಸ್‌ ಲಸಿಕೆ ನೀಡಲು ಇನ್ನೂ 10 ತಿಂಗಳು ಬೇಕಾಗುತ್ತದೆ

ದೇಶದ ಒಟ್ಟು ಜನಸಂಖ್ಯೆಯಲ್ಲಿ ಈಗ ಶೇ 45.7ರಷ್ಟು ಜನರಿಗಷ್ಟೇ ಮೊದಲ ಡೋಸ್‌ ಲಸಿಕೆ ನೀಡಲಾಗಿದೆ. ಶೇ 15.7ರಷ್ಟು ಜನರಿಗಷ್ಟೇ ಎರಡೂ ಡೋಸ್‌ ನೀಡಲಾಗಿದೆ.

ಲಸಿಕೆ ಪ್ರಮಾಣ

*18-44 ವರ್ಷದೊಳಗಿನ ಯುವಜನರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಉತ್ಸಾಹ ತೋರಿದ್ದಾರೆ. ಉಳಿದ ವಯೋಮಾನದವರಿಗೆ ಹೋಲಿಸಿದರೆ, ಲಸಿಕೆ ಪಡೆದವರಲ್ಲಿ ಈ ವಯೋಮಾನದವರೇ ಹೆಚ್ಚು

*33 ಕೋಟಿ ಯುವಜನರು ಮೊದಲ ಡೋಸ್ ಹಾಕಿಸಿಕೊಂಡಿದ್ದರೆ, ಎರಡನೇ ಡೋಸ್ ಪಡೆದವರ ಪ್ರಮಾಣ ಕಾಲು ಭಾಗದಷ್ಟೂ ಇಲ್ಲ.

* 45-59 ವರ್ಷ ವಯೋಮಾನದವರು ಈವರೆಗೆ ಒಟ್ಟು 22 ಕೋಟಿ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ

*ಈ ಪೈಕಿ 15 ಕೋಟಿ ಮೊದಲ ಡೋಸ್‌ ಪಡೆದವರು. ಇದರ ಅರ್ಧದಷ್ಟು ಜನರು ಎರಡನೇ ಡೋಸ್ ಪಡೆದಿದ್ದಾರೆ


* 60ಕ್ಕಿಂತ ವರ್ಷ ಮೇಲ್ಪಟ್ಟ ಜನಸಮುದಾಯದಕ್ಕೆ 15 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ

* ಐದು ಕೋಟಿ ಜನರು ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ

________________________

ಆಧಾರ: ಕೇಂದ್ರ ಆರೋಗ್ಯ ಸಚಿವಾಲಯ, ಕೋವಿಡ್‌19ಇಂಡಿಯಾ.ಒಆರ್‌ಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.