ADVERTISEMENT

ರಾಜಕೀಯ ಪಕ್ಷಗಳ ಆದಾಯ ಅನಾಮಧೇಯ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 19:32 IST
Last Updated 6 ಸೆಪ್ಟೆಂಬರ್ 2021, 19:32 IST
   

ದೇಣಿಗೆಯೇ ರಾಜಕೀಯ ಪಕ್ಷಗಳ ಆದಾಯದ ಪ್ರಧಾನ ಮೂಲ. 2019-20ನೇ ಸಾಲಿನಲ್ಲಿ ದೇಶದ ಪ್ರಮುಖ, ಏಳು ರಾಜಕೀಯ ಪಕ್ಷಗಳು ಒಟ್ಟು ₹ 4758 ಕೋಟಿ ಆದಾಯವನ್ನು ಸಂಗ್ರಹಿಸಿವೆ. ಇದರಲ್ಲಿ ಶೇ 92ಕ್ಕೂ ಹೆಚ್ಚು ಆದಾಯವನ್ನು ದೇಣಿಗೆ ಮೂಲಕ ಸಂಗ್ರಹಿಸಿವೆ. ಆದರೆ ಒಟ್ಟು ಆದಾಯದಲ್ಲಿ ಶೇ 70ಕ್ಕೂ ಹೆಚ್ಚು ದೇಣಿಗೆಯನ್ನು ನೀಡಿದವರು ಯಾರು ಎಂಬ ವಿವರ ಲಭ್ಯವಿಲ್ಲ. ಆ ವಿವರವನ್ನು ಕಡ್ಡಾಯವಾಗಿ ನೀಡಲೇಬೇಕು ಎಂಬ ಕಾನೂನು ದೇಶದಲ್ಲಿ ಇಲ್ಲ. ಹೀಗಾಗಿ ರಾಜಕೀಯ ಪಕ್ಷಗಳು ತಮ್ಮ ಆದಾಯದ ಬಹುಪಾಲು ಮೂಲವನ್ನು ಪೂರ್ಣ ಪ್ರಮಾಣದಲ್ಲಿ ಘೋಷಿಸುವುದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.