ADVERTISEMENT

Fact Check: ಕೋಳಿಗಳಿಂದ ಕಪ್ಪು ಶಿಲೀಂಧ್ರ ಸೋಂಕು ಹರಡುತ್ತದೆಯೇ?

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 16:58 IST
Last Updated 2 ಜೂನ್ 2021, 16:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೋವಿಡ್‌ ಎರಡನೇ ಅಲೆ ದೇಶದಲ್ಲಿ ಭಾರಿ ಅನಾಹುತ ಸೃಷ್ಟಿಸಿದೆ. ಜೊತೆಗೇ ಬಂದಿರುವ ಕಪ್ಪು ಶಿಲೀಂಧ್ರ ಸೋಂಕು ಹಾಗೂ ಬಿಳಿ ಶಿಲೀಂಧ್ರ ಸೋಂಕುಗಳು ಎಲ್ಲರ ಚಿಂತೆ ಹೆಚ್ಚಿಸಿವೆ. ಶಿಲೀಂಧ್ರ ಸೋಂಕು ಚಿಕಿತ್ಸೆಗೆ ಬೇಕಾದ ಔಷಧ ಕೊರತೆ ಇದೆ. ಫಾರಂ ಕೋಳಿಗಳಿಂದ ಮನುಷ್ಯರಿಗೆ ಸೋಂಕು ಹರಡಬಹುದು. ಪಂಜಾಬ್ ಸರ್ಕಾರವು ಅಂತಹ ಕೋಳಿ ಫಾರಂ ಅನ್ನು ಗುರುತಿಸಿದೆ ಎಂದು ಹೇಳುವ ಚಿತ್ರವು ವೈರಲ್ ಆಗಿದೆ.

ಕೋಳಿಗಳಿಂದಸೋಂಕು ಮನುಷ್ಯರಿಗೆ ಹರಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ. ಕಪ್ಪು ಶಿಲೀಂಧ್ರ ಸೋಂಕು ಹರಡುವ ಬಗ್ಗೆ ಸರ್ಕಾರ ಅಥವಾ ವೈದ್ಯಕೀಯ ಸಂಸ್ಥೆ ತಿಳಿಸುವ ಮಾಹಿತಿಗಳನ್ನು ಮಾತ್ರ ಹಂಚಿಕೊಳ್ಳಿ ಎಂದು ಸಲಹೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ಪೋಸ್ಟರ್ ತಪ್ಪು ಮಾಹಿತಿಯಿಂದ ಕೂಡಿದೆ ಎಂದು ವೇದಿಕೆ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT