ADVERTISEMENT

ಫ್ಯಾಕ್ಟ್ ಚೆಕ್: ಮಾವಿನಹಣ್ಣು ತಿಂದು ಕೋಕಕೋಲಾ ಕುಡಿದ 3 ಮಂದಿ ಸಾವು?

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 19:31 IST
Last Updated 10 ಜೂನ್ 2021, 19:31 IST
ಫ್ಯಾಕ್ಟ್‌ಚೆಕ್‌
ಫ್ಯಾಕ್ಟ್‌ಚೆಕ್‌   

‘ಚಂಡೀಗಡದಲ್ಲಿ ಮಾವಿನಹಣ್ಣು ತಿಂದು ನಂತರ ಕೋಕಕೋಲಾ ಕುಡಿದ ಮೂವರು ಯುವಕರು ತಲೆಸುತ್ತಿ ಬಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಹಾದಿಮಧ್ಯೆಯೇ ಮೃತಪಟ್ಟಿದ್ದಾರೆ. ಹೀಗಾಗಿ ಮಾವಿನಹಣ್ಣು ತಿಂದನಂತರ ಕೋಕಕೋಲಾ ಕುಡಿಯಬೇಡಿ. ಕುಡಿದರೆ ಸಾಯಬೇಕಾಗುತ್ತದೆ. ಮಾವಿನ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲವಿದ್ದು, ಕೋಕಕೋಲಾದಲ್ಲಿ ಕಾರ್ಬೋನಿಕ್ ಆಮ್ಲ ಇದೆ. ಎರಡನ್ನೂ ಒಟ್ಟಿಗೆ ಸೇವಿಸಿದ್ದಕ್ಕೆ ಸಾವು ಸಂಭವಿಸಿದೆ ಎಂದು ವೈದ್ಯರು ಹೇಳಿದ್ದಾರೆ’ ಎಂಬ ವರದಿ ಇರುವ ಪತ್ರಿಕಾ ವರದಿಯ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿಯೂ ಈ ಚಿತ್ರ ವೈರಲ್ ಆಗಿದೆ.

‘ಇದು 2017ರಲ್ಲಿ ವೈರಲ್ ಆಗಿದ್ದ ಸುಳ್ಳುಸುದ್ದಿ. ಇದು ಸುಳ್ಳು ಸುದ್ದಿ ಎಂದು 2017, 2018ರಲ್ಲಿ ಬ್ಯಾಂಗಲೋರ್ ಮಿರರ್, ಇಂಡಿಯನ್ ಎಕ್ಸ್‌ಪ್ರೆಸ್‌, ದಿ ಕ್ವಿಂಟ್ ಫ್ಯಾಕ್ಟ್‌ಚೆಕ್ ಪ್ರಕಟಿಸಿವೆ. ಇದು ಸುಳ್ಳು ಸುದ್ದಿ’ ಎಂದು ದಿ ಲಾಜಿಕಲ್ ಇಂಡಿಯನ್ ತಿಳಿಸಿದೆ. ‘ಸಿಟ್ರಿಕ್ ಆಮ್ಲ ಮತ್ತು ಕಾರ್ಬೋನಿಕ್ ಆಮ್ಲವನ್ನು ಒಟ್ಟಿಗೆ ತೆಗೆದುಕೊಂಡರೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಆದರೆ ಮಾರಣಾಂತಿಕ ಅಪಾಯವಾಗುವುದಿಲ್ಲ’ ಎಂದು ಇಂಡಿಯನ್ ಡಯಟಿಕ್ ಅಸೋಸಿಯೇಷನ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT