ADVERTISEMENT

ಫ್ಯಾಕ್ಟ್‌ಚೆಕ್: ಸೋನು ಸೂದ್ ವಿರುದ್ಧ ಕೇಂದ್ರ ಸರ್ಕಾರವು ಪ್ರಕರಣ ದಾಖಲಿಸಿದೆಯೇ?

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 19:30 IST
Last Updated 27 ಜೂನ್ 2021, 19:30 IST
ನಟ ಸೋನು ಸೂದ್ ಕುರಿತು ಹರಿದಾಡುತ್ತಿರುವ ಪೋಸ್ಟರ್
ನಟ ಸೋನು ಸೂದ್ ಕುರಿತು ಹರಿದಾಡುತ್ತಿರುವ ಪೋಸ್ಟರ್   

‘ನಟ ಸೋನು ಸೂದ್ ವಿರುದ್ಧ ಕೇಂದ್ರ ಸರ್ಕಾರವು ಪ್ರಕರಣ ದಾಖಲಿಸಿದೆ’ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ಕೋವಿಡ್ ಲಸಿಕೆ ಅಭಿಯಾನ ನಡೆಸಿದ್ದ ಅವರಿಗೆ ಎಲ್ಲಿಂದ ಲಸಿಕೆಗಳು ಸಿಕ್ಕಿವೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಶ್ನಿಸಿದ್ದಾರೆ. ಉತ್ತಮ ಕೆಲಸ ಮಾಡುತ್ತಿರುವ ಸೆಲೆಬ್ರಿಟಿಗಳು ಈ ಕೆಲಸಕ್ಕಾಗಿ ಬೆಲೆ ತೆರಬೇಕಾಗುತ್ತದೆ ಎಂದು ಕೆಲವು ಪೋಸ್ಟ್‌ಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಪೋಸ್ಟ್ ಒಂದರಲ್ಲಿ ಇರುವ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್‌ ಮೂಲಕ ಪರಿಶೀಲಿಸಲಾಯಿತು. ಊರುಗಳಿಗೆ ಮರಳುತ್ತಿದ್ದ ವಲಸೆ ಕಾರ್ಮಿಕರಿಗೆ ಸೋನು ಸೂದ್ ಸಹಾಯ ಮಾಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿದ ಚಿತ್ರ ಇದಾಗಿದೆ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ವೇದಿಕೆ ತಿಳಿಸಿದೆ. ಸೂದ್ ಅವರು ಲಸಿಕೆ ಬಗ್ಗೆ ಜನಜಾಗೃತಿ ಮೂಡಿಸಲು ಅಭಿಯಾನ ಶುರು ಮಾಡಿದ್ದಾರೆ. ಅವರು ಪಂಜಾಬ್ ಸರ್ಕಾರದ ಲಸಿಕೆ ಅಭಿಯಾನದ ರಾಯಭಾರಿ ಕೂಡ ಆಗಿದ್ದಾರೆ. ಆದರೆ ಸರ್ಕಾರವು ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಆದರೆ ರೆಮ್‌ಡಿಸಿವಿರ್ ಔಷಧ ಪೂರೈಕೆಗೆ ಸಂಬಂಧಿಸಿದ ಪ್ರಕರಣವೊಂದು ಬಾಂಬೆ ಹೈಕೋರ್ಟ್‌ನಲ್ಲಿ ಇನ್ನೂ ವಿಚಾರಣೆ ಹಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT