ADVERTISEMENT

Fact Check| ₹22ಕ್ಕೆ ಒಂದು ಲೀಟರ್‌ ಹಿಟ್ಟು ಸಿಗುತ್ತಿತ್ತು ಎಂದಿದ್ದರೇ ರಾಹುಲ್‌?

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 22:43 IST
Last Updated 4 ಸೆಪ್ಟೆಂಬರ್ 2022, 22:43 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ    

‘₹22ಕ್ಕೆ ಒಂದು ಲೀಟರ್‌ ಹಿಟ್ಟು ಸಿಗುತ್ತಿತ್ತು, ಈಗ ಲೀಟರ್‌ಗೆ ₹40 ಆಗಿದೆ’ ಎಂದು ಕಾಂಗ್ರೆಸ್‌ ನಾಯಕ ಹೇಳುತ್ತಿರುವ ವಿಡಿಯೊ ವೈರಲ್ ಆಗಿದೆ. ‘ಹಿಟ್ಟನ್ನು ಕೆ.ಜಿಯಲ್ಲಿ ಮಾರುತ್ತಾರೋ ಅಥವಾ ಲೀಟರ್‌ನಲ್ಲಿ ಮಾರುತ್ತಾತೋ ಎಂಬುದು ರಾಹುಲ್ ಗಾಂಧಿಗೆ ಗೊತ್ತಿಲ್ಲ. ಅವರು ಬೆಲೆ ಏರಿಕೆ ವಿರುದ್ಧ ಏಕೆ ಮಾತನಾಡುತ್ತಿದ್ದಾರೆ’ ಎಂದು ಈ ವಿಡಿಯೊಗೆ ಅಡಿಬರಹ ನೀಡಲಾಗಿದೆ. ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಹಲವರು ಈ ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ. ‘ಹಿಟ್ಟನ್ನು ಲೀಟರ್‌ ಲೆಕ್ಕದಲ್ಲಿ ಮಾರಾಟ ಮಾಡಲು ಯಾವಾಗಿನಿಂದ ಆರಂಭಿಸಿದರೋ’ ಎಂದು ಹಲವರು ಲೇವಡಿ ಮಾಡಿದ್ದಾರೆ.

‘ಈ ವಿಡಿಯೊದಲ್ಲಿ ಪೂರ್ಣ ಮಾಹಿತಿ ಇಲ್ಲ’ ಎಂದು ಇಂಡಿಯಾ ಟುಡೇ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್‌ ಭಾನುವಾರ ಆಯೋಜಿಸಿದ್ದ ಮಹಂಗಾಯಿ ಪೆ ಹಲ್ಲಾ ಬೋಲ್‌ ರ‍್ಯಾಲಿಯಲ್ಲಿ ರಾಹುಲ್ ಮಾತನಾಡಿದ್ದರು.₹22ಕ್ಕೆ ಒಂದು ಲೀಟರ್‌ ಹಿಟ್ಟು ಸಿಗುತ್ತಿತ್ತು, ಈಗ ಲೀಟರ್‌ಗೆ ₹40 ಆಗಿದೆ ಎಂದು ರಾಹುಲ್ ಹೇಳಿದರು. ಆದರೆ ತಕ್ಷಣವೇ ಕೆ.ಜಿಗೆ ಎಂದು ತಿದ್ದಿಕೊಂಡರು.ಭಾರತೀಯ ನ್ಯಾಷನಲ್‌ ಕಾಂಗ್ರೆಸ್‌ನ ಟ್ವಿಟರ್‌ ಖಾತೆಯಲ್ಲಿ ಕಾರ್ಯಕ್ರಮದ ಪೂರ್ಣ ವಿಡಿಯೊವನ್ನು ಪ್ರಕಟಿಸಲಾಗಿದೆ. ವಿಡಿಯೊದಲ್ಲಿ 1 ಗಂಟೆ 52ನೇ ನಿಮಿಷದ ನಂತರ ರಾಹುಲ್‌ ಅವರ ಈ ಮಾತು ಆರಂಭವಾಗುತ್ತದೆ. ಆದರೆ ಈ ವಿಡಿಯೊವನ್ನು ಕತ್ತರಿಸಿ, ಮೊದಲ ವಾಕ್ಯವಿರುವ ವಿಡಿಯೊವನ್ನಷ್ಟೇ ಹಂಚಿಕೊಳ್ಳಲಾಗಿದೆ’ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT