ADVERTISEMENT

ಫ್ಯಾಕ್ಟ್‌ಚೆಕ್‌: ಶಾಲೆಯಲ್ಲಿ ವಿದ್ಯಾರ್ಥಿಯಿಂದ ಆಜಾನ್– ವಿಡಿಯೊ ‌ನಿಜವೇ?

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 19:30 IST
Last Updated 17 ಜುಲೈ 2022, 19:30 IST
ಫ್ಯಾಕ್ಟ್‌ಚೆಕ್‌
ಫ್ಯಾಕ್ಟ್‌ಚೆಕ್‌    

ಶಾಲೆಯಲ್ಲಿವಿದ್ಯಾರ್ಥಿಯೊಬ್ಬಆಜಾನ್ ಪಠಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಬಾಲಕ ವೇದಿಕೆಯ ಮೇಲೆ ನಿಂತು ಆಜಾನ್‌ ಪಠಿಸುತ್ತಿದ್ದಾನೆ ಮತ್ತು ಶಾಲೆಯ ಇತರ ವಿದ್ಯಾರ್ಥಿಗಳು, ಶಿಕ್ಷಕರು ವೇದಿಕೆಯ ಕೆಳಗೆ ಸಾಲಾಗಿ ನಿಂತಿದ್ದಾರೆ. ಜಾರ್ಖಂಡ್‌ನ ಗ್ರಾಮವೊಂದರ ಶಾಲೆಯವಿಡಿಯೊ ಇದಾಗಿದೆ. ಗ್ರಾಮದಲ್ಲಿ ಮುಸ್ಲಿಮರ ಜನಸಂಖ್ಯೆಯೇ ಹೆಚ್ಚು ಇದೆ. ಅದಕ್ಕಾಗಿ ಹಿಂದೂ ಮಕ್ಕಳೂ ಮುಸ್ಲಿಮರ ಪ್ರಾರ್ಥನೆ ಹೇಳುವುದನ್ನು ಕಡ್ಡಾಯಗೊಳಿಸಲಾಗಿದೆ. ಇದು ಕಾಂಗ್ರೆಸ್‌ ಸರ್ಕಾರವಿರುವ ಜಾರ್ಖಂಡ್‌ನ ಪರಿಸ್ಥಿತಿ. ಇಸ್ಲಾಮಿಕ್‌ ಸ್ಟೇಟ್‌ ಆಗುವ ದಿಸೆಯಲ್ಲಿ ಇದು ಮೊದಲ ಹೆಜ್ಜೆ ಎಂಬ ವಿವರಣೆಯನ್ನು ಈ ವಿಡಿಯೊ ಜೊತೆ ನೀಡಲಾಗಿದೆ.

ವಿಡಿಯೊ ಜೊತೆ ನೀಡಲಾಗಿರುವ ಮಾಹಿತಿ ಸುಳ್ಳು ಎಂದು ‘ದಿ ಲಾಜಿಕಲ್‌ ಇಂಡಿಯನ್‌’ ವೇದಿಕೆ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ಕೆಲ ಮಾಧ್ಯಮಗಳುಈ ಘಟನೆ ಕುರಿತು ಜೂನ್‌ 6ರಂದು ವರದಿ ಪ್ರಕಟಿಸಿವೆ. ಅಸ್ಸಾಂನ ಜೊರ್ಹಾಟ್‌ನ ಹೇಮಾಲಯ್‌ ಜ್ಞಾನ್‌ ಬಿಕಾಶ್‌ ಪ್ರಾಥಮಿಕಶಾಲೆಯಲ್ಲಿಬೆಳಗಿನ ಪ್ರಾರ್ಥನೆ ವೇಳೆವಿದ್ಯಾರ್ಥಿಯೊಬ್ಬವೇದಿಕೆ ಏರಿ ಆಜಾನ್‌ ಪಠಿಸಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಶಿಕ್ಷಣ ಅಧಿಕಾರಿಯು ಶಾಲೆಯ ಪ್ರಾಂಶುಪಾಲರಿಗೆ ಶೋಕಾಸ್‌ ನೋಟಿಸ್‌ ನೀಡಿದ್ದರು. ಘಟನೆ ಕುರಿತು ಪ್ರತಿಕ್ರಿಯಿಸಿದ್ದ ಶಾಲೆಯ ಶಿಕ್ಷಕರೊಬ್ಬರು, ‘ಬಾಲಕ ವೇದಿಕೆ ಏರಿ ಆಜಾನ್‌ ಪಠಿಸುತ್ತಾನೆ ಎಂದು ನಮಗೆ ಮೊದಲೇ ತಿಳಿದಿರಲಿಲ್ಲ’ ಎಂದಿದ್ದರು ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT