ADVERTISEMENT

ಫ್ಯಾಕ್ಟ್‌ಚೆಕ್ | ಮ್ಯೂಸಿಕ್ ಬ್ಯಾಂಡ್ ರೂಪಿಸಿದ ಭಾರತದ ಹಳ್ಳಿಯ ಮಕ್ಕಳು?

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 22:30 IST
Last Updated 19 ಆಗಸ್ಟ್ 2021, 22:30 IST
ಫ್ಯಾಕ್ಟ್‌ಚೆಕ್
ಫ್ಯಾಕ್ಟ್‌ಚೆಕ್   

‘ಭಾರತದ ಯಾವುದೋ ಹಳ್ಳಿಯ ಮಕ್ಕಳು ಸೇರಿ ಒಂದು ಮ್ಯೂಸಿಕ್ ಬ್ಯಾಂಡ್ ರೂಪಿಸಿದ್ದಾರೆ. ಈ ಮಕ್ಕಳ ಬಳಿ ಯಾವುದೇ ಆಧುನಿಕ ವಸ್ತುಗಳು ಇಲ್ಲ. ಬದಲಿಗೆ ಡ್ರಮ್, ಕ್ಯಾನ್‌ಗಳನ್ನು ಬಳಸಿಕೊಂಡು ಸಂಗೀತ ಪರಿಕರಗಳನ್ನು ನಿರ್ಮಿಸಿಕೊಂಡಿದ್ದಾರೆ. ನಿಜವಾದ ಶಕ್ತಿ ಇರುವುದು ಮನಸ್ಸಿನಲ್ಲಿ’ ಎಂದು ಹಿಂದಿ ಚಿತ್ರನಟ ಅನುಪಮ್ ಖೇರ್ ವಿಡಿಯೊ ಒಂದನ್ನು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ಹಲವರು ರಿಟ್ವೀಟ್ ಮಾಡಿದ್ದಾರೆ.'RachanaPurohitasyaPutri/ ಎಂಬ ಹ್ಯಾಂಡಲ್‌ನಿಂದ ಈ ವಿಡಿಯೊವನ್ನು ಮೊದಲು ಟ್ವೀಟ್ ಮಾಡಲಾಗಿದೆ. ಅದನ್ನೇ ಅನುಪಮ್ ಖೇರ್ ಸಹ ಟ್ವೀಟ್ ಮಾಡಿದ್ದಾರೆ. ಪ್ರತಿಭೆಗೆ ಬಡತನವಿಲ್ಲ. ದೇಶಪ್ರೇಮವನ್ನು ತೋರಿಸಲು ದೊಡ್ಡ ಹುದ್ದೆಯೇ ಬೇಕಿಲ್ಲ. ದೇಶಪ್ರೇಮವಿದ್ದರೆ ಸಾಕು ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ಇದು ಸುಳ್ಳು ಸುದ್ದಿ ಎಂದು ದಿ ಲಾಜಿಕಲ್ ಇಂಡಿಯನ್ಫ್ಯಾಕ್ಟ್‌ಚೆಕ್ಪ್ರಕಟಿಸಿದೆ. ‘ಇದು ಭಾರತದ ಹಳ್ಳಿಯ ಮಕ್ಕಳ ಬ್ಯಾಂಡ್ ಅಲ್ಲ. ಬದಲಿಗೆ ಪಾಕಿಸ್ತಾನದ ಗಿಲ್ಗಿಟ್ ಬಲ್ಟಿಸ್ತಾನ್ ಪ್ರಾಂತದ ಹುಂಝಾ ಗ್ರಾಮದ ಬ್ಯಾಂಡ್. ಈ ಬ್ಯಾಂಡ್‌ಗೆ ಚಿಲಿಮ್ಚಿ ಬ್ಯಾಂಡ್ ಎಂದು ಹೆಸರಿಡಲಾಗಿದೆ. ವೈರಲ್ ಆಗಿರುವ ವಿಡಿಯೊವನ್ನು 2014ರಲ್ಲಿ ಮೊದಲ ಬಾರಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಭಾರತದ ಹಳ್ಳಿಯ ಮಕ್ಕಳ ಬ್ಯಾಂಡ್ ಎಂದು2015ರಲ್ಲೂ ಸುಳ್ಳು ಸುದ್ದಿ ಹರಡಿತ್ತು. ಆಗ ಆಲ್ಟ್‌ನ್ಯೂಸ್ಫ್ಯಾಕ್ಟ್‌ಚೆಕ್ಪ್ರಕಟಿಸಿತ್ತು. ಈಗ ಮತ್ತೆ ಸುಳ್ಳು ವಿವರಗಳೊಂದಿಗೆ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ’ ಎಂದು ದಿ ಲಾಜಿಕಲ್ ಇಂಡಿಯನ್ಫ್ಯಾಕ್ಟ್‌ಚೆಕ್ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT