ADVERTISEMENT

Fact Check: ಐದು ಸಾವಿರ ವರ್ಷ ಹಿಂದಿನ ವಿಗ್ರಹಗಳು ಇಂಡೊನೇಷ್ಯಾದಲ್ಲಿ ಪತ್ತೆ?

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 19:31 IST
Last Updated 28 ಜುಲೈ 2021, 19:31 IST
ಐದು ಸಾವಿರ ವರ್ಷಗಳ ಹಿಂದಿನದ್ದು ಎಂದು ಹೇಳಲಾಗಿರುವ ವಿಗ್ರಹಗಳು ಇಂಡೊನೇಷ್ಯಾದಲ್ಲಿ ಪತ್ತೆ
ಐದು ಸಾವಿರ ವರ್ಷಗಳ ಹಿಂದಿನದ್ದು ಎಂದು ಹೇಳಲಾಗಿರುವ ವಿಗ್ರಹಗಳು ಇಂಡೊನೇಷ್ಯಾದಲ್ಲಿ ಪತ್ತೆ   

ನೀರೊಳಗೆ ಮುಳುಗಿರುವ ವಿಷ್ಣುವಿನ ವಿಗ್ರಹಗಳ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇಂಡೊನೇಷ್ಯಾದ ಬಾಲಿಯಲ್ಲಿ ಸಮುದ್ರದಲ್ಲಿ ದೊರೆತ 5,000 ವರ್ಷಗಳಷ್ಟು ಹಳೆಯದಾದ ವಿಗ್ರಹಗಳು ಇವು ಎಂದು ಹೇಳಲಾಗುತ್ತಿದೆ. ‘ಇಂಡೊನೇಷ್ಯಾವು ಅಖಂಡ ಭಾರತದ ಭಾಗವಾಗಿತ್ತು.ದಕ್ಷಿಣ ಏಷ್ಯಾದಲ್ಲಿ ಅಖಂಡ ಭಾರತದ ಗಡಿಗಳಲ್ಲೆಲ್ಲಾ ಸನಾತನ ಧರ್ಮ ಇದೆ’ ಎಂಬುದಾಗಿ ಸಾಮಾಜಿಕ ಜಾಲತಾಣ ಬಳಕೆದಾರರು ಉಲ್ಲೇಖಿಸಿದ್ದಾರೆ.

ಈ ಚಿತ್ರಗಳು 2010ರಿಂದಲೂ ಅಂತರ್ಜಾಲದಲ್ಲಿ ಇವೆ ಎಂದುಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ತಂಡ ತಿಳಿಸಿದೆ. ಮೊದಲ ಚಿತ್ರವು ಬಾಲಿಯ ತುಲಾಂಬೆನ್ ತೀರದ ಬಳಿ ಇರುವ ಬುದ್ಧ ದೇವಾಲಯದ್ದು. ಚಿತ್ರ ಸಂಗ್ರಹ ವೆಬ್‌ಸೈಟ್‌ಗಳಾದ ಫ್ಲಿಕರ್ ಮತ್ತು ಶಟರ್ ಸ್ಟಾಕ್‌ಗಳಲ್ಲಿ ಇದೇ ಚಿತ್ರವನ್ನು ಕಾಣಬಹುದು. ಎರಡನೇ ಚಿತ್ರದಲ್ಲಿರುವದೇವತೆಗಳ ವಿಗ್ರಹಗಳನ್ನು 2000ನೇ ಇಸ್ವಿಯಲ್ಲಿ ಹವಳದ ಬಂಡೆಗಳ ಪುನರ್ವಸತಿ ಯೋಜನೆಯ ಭಾಗವಾಗಿ ರಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT