ADVERTISEMENT

Fact Check: ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ ಬಳಿಯಲಾಯಿತೇ?

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 19:31 IST
Last Updated 11 ಏಪ್ರಿಲ್ 2021, 19:31 IST
ರಾಕೇಶ್ ಟಿಕಾಯತ್‌ಗೆ ಮಸಿ ಬಳಿದ ಚಿತ್ರ ವೈರಲ್ ಆಗಿದೆ
ರಾಕೇಶ್ ಟಿಕಾಯತ್‌ಗೆ ಮಸಿ ಬಳಿದ ಚಿತ್ರ ವೈರಲ್ ಆಗಿದೆ   

ರೈತ ಮುಖಂಡ ರಾಕೇಶ್ ಟಿಕಾಯತ್ ಅವರ ಮುಖಕ್ಕೆ ಮಸಿ ಬಳಿಯಲಾಗಿದೆ. ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜಸ್ಥಾನದಲ್ಲಿ ಭಾರತ್‌ ಬಂದ್ ಮಾಡುವಂತೆ ಟಿಕಾಯತ್ ಕರೆ ನೀಡಿದ್ದಾರೆ ಎಂಬ ಕಾರಣಕ್ಕೆ ಅವರ ಮುಖಕ್ಕೆ ಮಸಿ ಹಚ್ಚಲಾಗಿದೆ. ಟಿಕಾಯತ್ ಬೆಂಬಲಿಗರಿಗೂ ರಾಜಸ್ಥಾನದ ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಮಸಿ ಬಳಿದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಚಿತ್ರವನ್ನು ರಿವರ್ಸ್ ಇಮೇ‌ಜ್ ತಂತ್ರಜ್ಞಾನದ ಮೂಲಕ ಪರಿಶೀಲನೆ ನಡೆಸಿದಾಗ ಮಸಿ ಬಳಿದಿರುವುದು ಸುಳ್ಳು ಎಂಬುದು ದೃಢಪಟ್ಟಿದೆ. 2021 ಜನವರಿ 28ರಂದು ಟಿಕಾಯತ್ ಅವರು ಎಎನ್‌ಐ ಸುದ್ದಿಸಂಸ್ಥೆಯ ಪ್ರತಿನಿಧಿ ಜೊತೆ ಮಾತನಾಡುತ್ತಿರುವ ಚಿತ್ರ ಇದಾಗಿದ್ದು, ಮೂಲ ಚಿತ್ರದಲ್ಲಿ ಮಸಿ ಬಳಿದಿಲ್ಲ. ಚಿತ್ರವನ್ನು ತಿರುಚಲಾಗಿದೆ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೆಬ್‌ಸೈಟ್ ತಿಳಿಸಿದೆ. 2021ರ ಏಪ್ರಿಲ್ 2ರಂದುರಾಜಸ್ಥಾನದ ಅಲ್ವಾರ್‌ನಲ್ಲಿ ಟಿಕಾಯತ್ ತಂಡದ ಮೇಲೆ ದಾಳಿ ನಡೆದಿತ್ತಾದರೂ, ಮಸಿ ಬಳಿದ ಪ್ರಸಂಗ ನಡೆದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT