ADVERTISEMENT

Fact Check: ಕೋವಿಡ್‌ ಲಸಿಕೆ ಪಡೆದವರು ಅರಿವಳಿಕೆ ಚುಚ್ಚುಮದ್ದು ಪಡೆದರೆ ಅಪಾಯವೇ?

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 19:31 IST
Last Updated 18 ಜೂನ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

‘ಕೋವಿಡ್‌ ಲಸಿಕೆ ಹಾಕಿಸಿಕೊಂಡವರು ಅರಿವಳಿಕೆ ಚುಚ್ಚುಮದ್ದು ತೆಗೆದುಕೊಂಡರೆ ಜೀವಕ್ಕೆ ಅಪಾಯವಿದೆ. ನನ್ನ ಗೆಳೆಯನೊಬ್ಬ ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದ. ಎರಡೇ ದಿನದಲ್ಲಿ ಹಲ್ಲಿನ ಚಿಕಿತ್ಸೆಗಾಗಿ ದಂತವೈದ್ಯರ ಬಳಿ ಹೋಗಿದ್ದ. ವೈದ್ಯರು ಆತನಿಗೆ ಅರಿವಳಿಕೆ ನೀಡಿದರು. ಅವನು ತಕ್ಷಣವೇ ಸತ್ತುಹೋದ’ ಎಂಬ ವಿವರ ಇರುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದು ಸುಳ್ಳು ಸುದ್ದಿ ಎಂದು ಹಲವು ಫ್ಯಾಕ್ಟ್‌ಚೆಕ್ ವೇದಿಕೆಗಳು ತಿಳಿಸಿವೆ. ‘ಕೋವಿಡ್‌ ಲಸಿಕೆ ಹಾಕಿಸಿಕೊಂಡವರು ಅರಿವಳಿಕೆ ತೆಗೆದುಕೊಂಡರೆ ಜೀವಕ್ಕೆ ಅಪಾಯ, ಸಾವು ಸಂಭವಿಸುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಈ ಸುಳ್ಳುಸುದ್ದಿಯನ್ನು ನಂಬಬೇಡಿ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ’ ಎಂದು ಪಿಐಬಿ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT