ADVERTISEMENT

Fact check: ಈದ್ ದಿನ ರಸ್ತೆಯಲ್ಲಿ ರಕ್ತ ಹರಿದಿದ್ದು ಎಲ್ಲಿ?

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 19:30 IST
Last Updated 22 ಜುಲೈ 2021, 19:30 IST
   

‘ಜುಲೈ 21ರಂದು ನಡೆದ ಈದ್ ಹಬ್ಬದಲ್ಲಿ ಭಾರತದ ರಸ್ತೆಗಳಲ್ಲಿ ರಕ್ತ ಹರಿದಿದೆ’ ಎಂಬ ಒಕ್ಕಣೆ ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಗಳನ್ನು ವಧೆ ಮಾಡಿದ್ದರಿಂದ ರಕ್ತವು ರಸ್ತೆವರೆಗೆ ಹರಿದು, ಪ್ರವಾಹ ಸೃಷ್ಟಿಸಿದೆ ಎಂದು ಉಲ್ಲೇಖಿಸಲಾಗಿದೆ. ಹಲವರು ಈ ಚಿತ್ರವನ್ನು ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಈದ್ ಹಬ್ಬದ ದಿನ ಪ್ರಾಣಿವಧೆ ನಡೆದಿದ್ದರೂ, ರಸ್ತೆಗೆ ಬರುವಷ್ಟು ರಕ್ತ ಹರಿದಿಲ್ಲ, ಮೇಲಾಗಿ ಈ ಚಿತ್ರವು ಭಾರತದ್ದಲ್ಲ’ ಎಂದು ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ವರದಿ ಮಾಡಿದೆ. 2016ರಲ್ಲಿ ಬಾಂಗ್ಲಾದೇಶದಲ್ಲಿ ಪ್ರವಾಹ ಉಂಟಾಗಿತ್ತು. ಪ್ರವಾಹದ ನೀರಿನ ಜೊತೆ ವಧೆ ಮಾಡಲಾದ ಪ್ರಾಣಿಗಳ ರಕ್ತವೂ ಬೆರೆತಿದ್ದರಿಂದ ನೀರು ಕೆಂಪಾಗಿ ಗೋಚರಿಸಿದೆ ಎಂದು ಬಿಬಿಸಿ, ಗಾರ್ಡಿಯನ್ ಮೊದಲಾದ ಪತ್ರಿಕೆಗಳು ಅಂದು ವರದಿ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT