ADVERTISEMENT

ಫ್ಯಾಕ್ಟ್ ಚೆಕ್: ನಿಮ್ಮ ಖಾತೆಗೆ ₹2.67 ಲಕ್ಷ ಪಾವತಿಯಾಗಿದೆಯೇ?

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 21:45 IST
Last Updated 26 ಆಗಸ್ಟ್ 2021, 21:45 IST
ಫ್ಯಾಕ್ಟ್ ಚೆಕ್
ಫ್ಯಾಕ್ಟ್ ಚೆಕ್   

ಇತ್ತೀಚೆಗೆ ಕೆಲವರ ಮೊಬೈಲ್‌ಗೆ ಸಂದೇಶವೊಂದು ಬರುತ್ತಿದೆ. ‘ನಿಮ್ಮ ಖಾತೆಗೆ ₹2.67 ಲಕ್ಷ ಜಮಾ ಮಾಡಲಾಗಿದೆ’ ಎಂಬ ಉಲ್ಲೇಖ ಸಂದೇಶಗಳಲ್ಲಿದೆ. ಈ ಸಂದೇಶವನ್ನು ಸ್ನೇಹಿತರು, ಸಂಬಂಧಿಕರಿಗೆ ಫಾರ್ವರ್ಡ್ ಮಾಡಿ, ಈ ಸಂದೇಶ ನಿಮಗೆ ಬಂದಿದೆಯೇ ಎಂದು ಕೇಳುತ್ತಿದ್ದಾರೆ. ‘ಸರ್ಕಾರಿ ಯೋಜನೆ’ ಅಡಿಯಲ್ಲಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ವಿಚಾರ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರನ್ನು ಗೊಂದಲಕ್ಕೆ ತಳ್ಳಿದೆ.

ಇಂತಹ ಸಂದೇಶಗಳ ಬಗ್ಗೆ ಹುಷಾರಾಗಿರಿ ಎಂದು ಕೇಂದ್ರ ಸರ್ಕಾರದ ಪಿಐಬಿ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಹೇಳಿದೆ. ಭಾರತ ಸರ್ಕಾರವು ಅಂತಹ ಯಾವುದೇ ಯೋಜನೆಯನ್ನು ಘೋಷಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ. ‘ನಿಮ್ಮ ಖಾತೆಗೆ ಹಣ ಸಂದಾಯವಾಗಬೇಕಿದ್ದರೆ ಸಂದೇಶದ ಕೆಳಗಡೆ ನೀಡಲಾಗಿರುವ ಲಿಂಕ್‌ ಅನ್ನು ಒತ್ತಿ’ ಎಂದು ಸೂಚಿಸಲಾಗಿದೆ. ಆದರೆ, ಇಂತಹ ಸಂದೇಶಗಳ ಹಿಂದೆ ವಂಚಕರ ಕೈವಾಡವಿದೆ. ಇಂತಹ ವಂಚನೆಗಳಿಗೆ ಈಡಾಗಬೇಡಿ ಎಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT