ADVERTISEMENT

Fact Check: ಬುರ್ಖಾದೊಳಗೆ ಮಗು ಬಚ್ಚಿಟ್ಟುಕೊಂಡಿದ್ದರೇ?

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 22:30 IST
Last Updated 7 ಆಗಸ್ಟ್ 2022, 22:30 IST
   

ಬುರ್ಖಾಧಾರಿಯೊಬ್ಬರು ಮಗುವೊಂದನ್ನು ಬುರ್ಖಾದೊಳಗೆ ಬಚ್ಚಿಟ್ಟುಕೊಂಡು ಓಡಿ ಹೋಗುತ್ತಿರುವ ಮತ್ತು ವ್ಯಕ್ತಿಯೊಬ್ಬರು ಕಾರಿನಲ್ಲಿ ಅವರನ್ನು ಹಿಂಬಾಲಿಸುತ್ತಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರಿನಲ್ಲಿದ್ದ ವ್ಯಕ್ತಿ ಮತ್ತು ಇನ್ನೊಬ್ಬ ಮಹಿಳೆಯು, ಬುರ್ಖಾಧಾರಿಯನ್ನು ಹಿಡಿಯುತ್ತಾರೆ. ಆಗ ಬುರ್ಖಾ ಧರಿಸಿದ್ದದ್ದು ಪುರುಷ ಎಂಬುದು ಗೊತ್ತಾಗುತ್ತದೆ. ‘ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಬುರ್ಖಾಧಾರಿಗಳು ಮಕ್ಕಳ ಕಳ್ಳರು. ಹೀಗಾಗಿ ಅವರ ಬಗ್ಗೆ ಎಚ್ಚರದಿಂದ ಇರಿ’ ಎಂಬ ಸಂದೇಶವನ್ನು ವಿಡಿಯೊ ಜತೆಗೆ ಹಂಚಿಕೊಳ್ಳಲಾಗಿದೆ. ಕೆಲವರು ಬುರ್ಖಾವನ್ನು ನಿಷೇಧ ಮಾಡಿ ಎಂದು ಆಗ್ರಹಿಸಿದ್ದಾರೆ.

ಇದು ಸುಳ್ಳು ಸುದ್ದಿ ಎಂದು ‘ದಿ ಲಾಜಿಕಲ್ ಇಂಡಿಯನ್’ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ಇದು ಕಿರುಚಿತ್ರವೊಂದರ ಭಾಗ.ಸೋನು ಚೌಧರಿ ಫಿಲ್ಮ್ಸ್‌ ಎಂಬ ಸಂಸ್ಥೆಯು ಈ ಕಿರುಚಿತ್ರವನ್ನು ನಿರ್ಮಿಸಿದೆ. ಇದು ಮನರಂಜನೆಯ ಉದ್ದೇಶಕ್ಕಾಗಿ ನಿರ್ಮಿಸಿದ ಕಿರುಚಿತ್ರ ಎಂದು ಅದರಲ್ಲೇ ಹೇಳಲಾಗಿದೆ. ಈ ಕಿರುಚಿತ್ರವನ್ನು ತಿರುಚಿ, ಬುರ್ಖಾವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇದನ್ನು ಒಂದು ಕೋಮಿನ ಬಗ್ಗೆ ತಪ್ಪು ಕಲ್ಪನೆ ಬರುವಂತೆ ಬಳಸಿಕೊಳ್ಳಲಾಗಿದೆ’ ಎಂದು ದಿ ಲಾಜಿಕಲ್ ಇಂಡಿಯನ್ ತನ್ನ ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT