ADVERTISEMENT

ಫ್ಯಾಕ್ಟ್ ಚೆಕ್: ವೈರಲ್ ಆಗಿರುವ ಮನಮೋಹನ್ ಸಿಂಗ್ ಅವರ ಟ್ವೀಟ್‌ನಲ್ಲಿ ಏನಿದೆ?

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 22:15 IST
Last Updated 24 ಆಗಸ್ಟ್ 2021, 22:15 IST
ಫ್ಯಾಕ್ಟ್ ಚೆಕ್
ಫ್ಯಾಕ್ಟ್ ಚೆಕ್   

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಮಾಡಿದ್ದಾರೆ ಎನ್ನಲಾದ ಟ್ವೀಟ್ ಬಗ್ಗೆ ಚರ್ಚೆಯಾಗುತ್ತಿದೆ. ‘ಬಿಎಸ್‌ಎನ್‌ಎಲ್ ಮುನ್ನಡೆಸಲು ಸಾಧ್ಯವಾಗದವ, ರೈಲ್ವೆ, ವಿಮಾನ ನಿಲ್ದಾಣಗಳನ್ನು ಕಾರ್ಯಾಚರಣೆ ನಡೆಸಲು ಸಾಧ್ಯವಾಗದ ವ್ಯಕ್ತಿಯೊಬ್ಬ ದೇಶವನ್ನು ನಡೆಸುತ್ತಾನೆ ಎಂದು ಅಂಧಭಕ್ತನೊಬ್ಬ ಹೇಳುತ್ತಾನೆ’ ಎಂಬ ಉಲ್ಲೇಖ ಆ ಟ್ವೀಟ್‌ನಲ್ಲಿದೆ. ‘ತನ್ನ ಹೆಂಡತಿಯನ್ನು ನೋಡಿಕೊಳ್ಳಲು ಸಾಧ್ಯವಾಗದವರು ದೇಶವನ್ನು ಮುನ್ನಡೆಸುತ್ತಾರೆ’ ಎಂದು ಟ್ವಿಟರ್ ಬಳಕೆದಾರರೊಬ್ಬರು ರೀಟ್ವೀಟ್ ಮಾಡುವಾಗ ಉಲ್ಲೇಖಿಸಿದ್ದಾರೆ.

ಡಾ. ಮನಮೋಹನ್ ಸಿಂಗ್ ಅವರು ಈವರೆಗೆ ಟ್ವಿಟರ್ ಖಾತೆ ತೆರೆದಿಲ್ಲ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ಸ್ಪಷ್ಟಪಡಿಸಿದೆ. ಖಾತೆಯ ಪರಿಚಯದಲ್ಲಿ ‘ವಿಡಂಬನಾ ಖಾತೆ’ ಎಂದು ಉಲ್ಲೇಖಿಲಾಗಿದೆ.ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕ ಸರಳ್ ಪಟೇಲ್ ಅವರು ಇದನ್ನು ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ಸಿಂಗ್ ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಟ್ವೀಟ್ ಮಾಡಲಾಗಿದೆ. ಒಂದು ವೇಳೆ ಖಾತೆ ಅವರದ್ದೇ ಆಗಿದ್ದರೆ ಅದಕ್ಕೆ ಬ್ಲೂಟಿಕ್ ಇರಬೇಕಿತ್ತು. ನಕಲಿ ಖಾತೆಗಳನ್ನು ಹಿಂಬಾಲಿಸಬೇಡಿ ಎಂದು ಪಟೇಲ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT