ADVERTISEMENT

Fact Check: ‘ಪಠಾಣ್’ ಗಳಿಕೆಯನ್ನು ಪಾಕ್‌ ಎನ್‌ಜಿಒಗೆ ಕೊಡಲಿದ್ದಾರಾ ಶಾರುಕ್ ?

ಪ್ರಜಾವಾಣಿ ವಿಶೇಷ
Published 20 ಡಿಸೆಂಬರ್ 2022, 21:45 IST
Last Updated 20 ಡಿಸೆಂಬರ್ 2022, 21:45 IST
   

‘ಬಾಲಿವುಟ್ ನಟ ಶಾರುಕ್ ಖಾನ್ ಅವರು ತಮ್ಮ ಹೊಸ ಚಿತ್ರ ‘ಪಠಾಣ್‌’ ಪ್ರದರ್ಶನದ ಮೊದಲ ದಿನದ ಗಳಿಕೆಯನ್ನು ಪಾಕಿಸ್ತಾನದ ಸ್ವಯಂಸೇವಾ ಸಂಸ್ಥೆಯೊಂದಕ್ಕೆ ನೀಡಲಿದ್ದಾರೆ. ಶಾರುಕ್ ಅವರ ಈ ನಿಲುವನ್ನು ಸಹನಟ ಜಾನ್ ಅಬ್ರಹಾಂ ಬೆಂಬಲಿಸಿದ್ದಾರೆ. ಈ ಕಾರಣಕ್ಕೆ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿದರೆ ತಾವು ಹೆದರುವುದಿಲ್ಲ ಎಂದು ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ’ ಎನ್ನಲಾದ ಟ್ವೀಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಿಬಿಸಿ ಹಿಂದಿ ವಾಹಿನಿಯ ಟ್ವಿಟರ್ ಖಾತೆಯ ಹೆಸರಿನಲ್ಲಿ ಈ ಸುದ್ದಿ ಹರಿದಾಡುತ್ತಿದೆ. ಆದರೆ ಟ್ವೀಟ್‌ನಲ್ಲಿರುವ ಅಂಶಗಳು ನಿಜವಲ್ಲ.

ಸಾಕಷ್ಟು ಚರ್ಚೆಗೆ ಒಳಗಾಗಿರುವ ಟ್ವೀಟ್, ಬಿಬಿಸಿ ಹಿಂದಿ ವಾಹಿನಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇಲ್ಲ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಟ್ವೀಟ್‘ಒಕೆ ಸಟೈರ್’ ಎಂಬ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿಪ್ರಕಟವಾಗಿದೆ. ಅದನ್ನು ಬಿಬಿಸಿ ಹಿಂದಿ ಟ್ವಿಟರ್ ಖಾತೆಯಲ್ಲಿ ಇರುವಂತೆ ತಿರುಚಲಾಗಿದೆ. ಚಿತ್ರದ ಗಳಿಕೆಯ ಹಣವನ್ನು ಪಾಕಿಸ್ತಾನ್ ಎನ್‌ಜಿಒಗೆ ನೀಡುವುದಾಗಿ ಶಾರುಕ್ ಅವರು ಹೇಳಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಆಲ್ಟ್‌ ನ್ಯೂಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.