ADVERTISEMENT

Fact Check: ಹೆದ್ದಾರಿಯನ್ನೇ ಆವರಿಸಿತಾ ಮಜಾರ್?

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 19:32 IST
Last Updated 9 ನವೆಂಬರ್ 2022, 19:32 IST
   

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ #StopLandJihad ಎಂಬ ಹ್ಯಾಷ್‌ಟ್ಯಾಗ್ ಸಾಕಷ್ಟು ಟ್ರೆಂಡಿಂಗ್‌ನಲ್ಲಿದೆ. ಸಾರ್ವಜನಿಕ ಸ್ಥಳಗಳನ್ನು ಮುಸ್ಲಿಮರ ಧಾರ್ಮಿಕ ಕೇಂದ್ರಗಳು ಅತಿಕ್ರಮಣ ಮಾಡಿಕೊಂಡಿವೆ ಎಂದು ಆರೋಪಿಸಲಾಗುತ್ತಿದೆ. ಒತ್ತುವರಿ ನಡೆದಿದೆ ಎನ್ನಲಾದ ಹಲವು ಚಿತ್ರಗಳ ಪೈಕಿ ಹೆದ್ದಾರಿಯ ಮೇಲೆ ಮಜಾರ್ (ಮುಸ್ಲಿಂ ಧಾರ್ಮಿಕ ಮುಖಂಡರ ಸಮಾಧಿ) ಇರುವ ಚಿತ್ರ ಸಾಕಷ್ಟು ಹರಿದಾಡುತ್ತಿದೆ. ‘ಹೆದ್ದಾರಿಯನ್ನೇ ಮಜಾರ್ ಒತ್ತುವರಿ ಮಾಡಿದೆ. ಸಮಾಧಿ ಮೇಲೆ ಹೊದಿಸಲಾಗಿರುವ ಹೊದಿಕೆಯನ್ನು ಬಡವರಿಗಾದರೂ ನೀಡಬಹುದು’ ಎಂದು ಕೆಲವರು ಸಲಹೆ ನೀಡಿದ್ದಾರೆ. ಆದರೆ ಇದು ತಿರುಚಲಾದ ಚಿತ್ರ.

ಹೆದ್ದಾರಿಯ ಮೇಲೆ ಮಜಾರ್ ಇದೆ ಎನ್ನಲಾಗುವ ಚಿತ್ರವನ್ನು ಪರಿಶೀಲಿಸಲಾಗಿದ್ದು, ಅದನ್ನು ತಿರಚಲಾಗಿದೆ ಎಂದು ‘ಇಂಡಿಯಾಟುಡೇ’ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. ಹೆದ್ದಾರಿಯ ಮೂಲ ಚಿತ್ರವನ್ನು ಪಿಟಿಐ ಸುದ್ದಿಸಂಸ್ಥೆ ಸೆರೆಹಿಡಿದಿದೆ. ಈ ಚಿತ್ರವನ್ನು 2016ರಿಂದಲೂ ಹಲವು ಮಾಧ್ಯಮಸಂಸ್ಥೆಗಳು ಪ್ರಕಟಿಸಿವೆ. ಮೂಲ ಚಿತ್ರದಲ್ಲಿ ಮಜಾರ್ ಇಲ್ಲ. ಅದನ್ನು ಕೃತಕವಾಗಿ ಸೇರಿಸಲಾಗಿದ್ದು, ಜನರನ್ನು ತಪ್ಪು ದಾರಿಗೆ ಎಳೆಯಲಾಗಿದೆ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT