ADVERTISEMENT

FactCheck: ಮಸೀದಿಗಳ ರಕ್ಷಣೆಗೆ ಕಾಯ್ದೆ ತಂದಿತಾ ರಾಜಸ್ಥಾನ ಸರ್ಕಾರ?

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 4:39 IST
Last Updated 6 ಸೆಪ್ಟೆಂಬರ್ 2021, 4:39 IST
   

ಮಸೀದಿಗಳ ರಕ್ಷಣೆ ಕುರಿತು ರಾಜಸ್ಥಾನ ಸರ್ಕಾರವು ಜಾರಿಗೆ ತಂದಿರುವ ತಿದ್ದುಪಡಿ ಕಾಯ್ದೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಸಾರ್ವಜನಿಕ ಆಸ್ತಿ ಕಾಯ್ದೆ 1985ರ ಪ್ರಕಾರ,ಮಸೀದಿಗಳ ಆಸ್ತಿಗೆ ಹಾನಿ ಮಾಡುವುದು, ಮಸೀದಿ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವುದು, ಸಿಬ್ಬಂದಿ ಅಥವಾ ಮಸೀದಿಗೆ ಸಂಬಂಧಿಸಿದವರನ್ನು ಬೆದರಿಸುವುದು ಅಪರಾಧ. ಇದು ಜಾಮೀನು ರಹಿತ ಪ್ರಕರಣ ಎಂಬುದಾಗಿ ಪೋಸ್ಟ್‌ಗಳು ಹರಿದಾಡುತ್ತಿವೆ.

ಮಸೀದಿಗಳ ರಕ್ಷಣೆಗೆಂದೇ ತಿದ್ದುಪಡಿ ಕಾಯ್ದೆ ತಂದಿರುವುದನ್ನು ರಾಜಸ್ಥಾನ ಸರ್ಕಾರ ಅಲ್ಲಗಳೆದಿದೆ. ಸಾರ್ವಜನಿಕ ಆಸ್ತಿ ಕಾಯ್ದೆ 1984 ಸರಿಯಾದ ಮಾಹಿತಿ. ಆದರೆ ಪೋಸ್ಟ್‌ಗಳಲ್ಲಿ 1985 ಎಂಬುದಾಗಿ ಉಲ್ಲೇಖವಾಗಿದೆ. ಕಾಯ್ದೆಯಡಿ ಮಸೀದಿಗಳೂ ಸಾರ್ವಜನಿಕ ಆಸ್ತಿ ಎನಿಸಿಕೊಳ್ಳುತ್ತವೆಯೇ ಹೊರತು ಇವುಗಳನ್ನು ಪ್ರತ್ಯೇಕವಾಗಿ ಗುರುತಿಸಿಲ್ಲ. ಮಸೀದಿಗಳ ರಕ್ಷಣೆಗಾಗಿ ಕಾಯ್ದೆಯ 427ನೇ ಸೆಕ್ಷನ್‌ಗೆ ಸರ್ಕಾರ ತಿದ್ದುಪಡಿ ತಂದಿದೆ ಎಂಬುದು ವಾಸ್ತವಕ್ಕೆ ದೂರ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT