ADVERTISEMENT

ಆರ್‌ಎಸ್‌ಎಸ್‌ನ ನಾರಾಯಣ ದಭಾಡ್ಕರ್ ಬೇರೆಯವರಿಗೆ ಹಾಸಿಗೆ ಬಿಟ್ಟುಕೊಟ್ಟಿದ್ದರೇ?

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 19:41 IST
Last Updated 30 ಏಪ್ರಿಲ್ 2021, 19:41 IST
   

ನಾಗಪುರದ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆಗಾಗಿ ದಾಖಲಾಗಿದ್ದ, ಆರ್‌ಎಸ್‌ಎಸ್‌ನ ಸ್ವಯಂಸೇವಕ85 ವರ್ಷದ ನಾರಾಯಣ ದಭಾಡ್ಕರ್ ಅವರು ಬೇರೆ ವ್ಯಕ್ತಿಗೆ ಹಾಸಿಗೆ ಬಿಟ್ಟುಕೊಟ್ಟಿದ್ದರು. 40 ವರ್ಷದ ಕೋವಿಡ್‌ ರೋಗಿಯೊಬ್ಬರಿಗೆ ಹಾಸಿಗೆ ಸಿಗದ ಕಾರಣ, ಆ ವ್ಯಕ್ತಿಯ ಪತ್ನಿ ಆಸ್ಪತ್ರೆ ಸಿಬ್ಬಂದಿಯನ್ನು ಅಂಗಲಾಚುತ್ತಿದ್ದರು. ಅದನ್ನು ನೋಡಿ ನಾರಾಯಣ ತನ್ನ ಹಾಸಿಗೆ ಬಿಟ್ಟುಕೊಟ್ಟಿದ್ದರು. ಹಾಸಿಗೆ ಬಿಟ್ಟುಕೊಟ್ಟ ನಾಲ್ಕೇ ದಿನದಲ್ಲಿ ನಾರಾಯಣ ಮೃತರಾದರು ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಇದು ವೈರಲ್ ಸಹ ಆಗಿತ್ತು.

ಆದರೆ, ಇದು ಸುಳ್ಳು ಸುದ್ದಿ ಎಂದು ಇಂದಿರಾ ಗಾಂಧಿ ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ. ನಾರಾಯಣ ಅವರು ಗುಣಮುಖರಾದ ನಂತರ ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು. ಅವರು ಮನೆಗೆ ಹೋದ ದಿನ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ. ಅಲ್ಲದೆ ಅಂದು ಕೋವಿಡ್‌ ರೋಗಿಗಳಿಗೆಂದು ಮೀಸಲಿರಿಸಿದ್ದ ಹಾಸಿಗೆಗಳಲ್ಲಿ, ನಾಲ್ಕು ಹಾಸಿಗೆಗಳು ಖಾಲಿಯೇ ಇದ್ದವು. ವೈರಲ್ ಆಗಿರುವ ಸುದ್ದಿಯಲ್ಲಿ ಇರುವ ಮಾಹಿತಿ ಸುಳ್ಳು ಎಂದು ಆಸ್ಪತ್ರೆಯು ಪ್ರಕಟಣೆ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT